alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಸಂದರ್ಭದಲ್ಲಿ ಜಿಯೋ ನೀಡ್ತಿದೆ ಭರ್ಜರಿ ಆಫರ್

ಐಪಿಎಲ್ ಹಬ್ಬ ಶುರುವಾಗಲು ಇನ್ನೊಂದೇ ದಿನ ಬಾಕಿ ಇದೆ. ಏಪ್ರಿಲ್ 7ರಿಂದ ಐಪಿಎಲ್ ಪಂದ್ಯಾವಳಿಗಳು ಶುರುವಾಗ್ತಿವೆ. ಈ ಸಂದರ್ಭದಲ್ಲಿ ರಿಲಾಯನ್ಸ್ ಜಿಯೋ ಭರ್ಜರಿ ಆಫರ್ ಒಂದನ್ನು ಶುರು ಮಾಡಿದೆ. ಈ ಪ್ರಿಪೇಯ್ಡ್ ಪ್ಯಾಕ್ ಗಾಗಿ ಗ್ರಾಹಕರು 251 ರೂಪಾಯಿ ಖರ್ಚು ಮಾಡಬೇಕಿದೆ.

ಈ 251 ರೂಪಾಯಿ ಪ್ಯಾಕ್ 51 ದಿನ ಸಿಂಧುತ್ವ ಹೊಂದಿರಲಿದೆ. ಇದ್ರಲ್ಲಿ ಗ್ರಾಹಕರಿಗೆ 102 ಜಿಬಿ ಡೇಟಾ ಸಿಗಲಿದೆ. ರಿಲಾಯನ್ಸ್ ಜಿಯೋ ಮೂಲಗಳ ಪ್ರಕಾರ ಗ್ರಾಹಕರು ಈ ಪ್ಯಾಕ್ ಮೂಲಕ ಐಪಿಎಲ್ ಪಂದ್ಯಗಳನ್ನು ಲೈವ್ ನೋಡಬಹುದಾಗಿದೆ. 51 ದಿನಗಳವರೆಗೆ ಸುಮಾರು ಎಲ್ಲ ಪಂದ್ಯಗಳನ್ನು ನೀವು ಈ ಪ್ಲಾನ್ ಮೂಲಕ ಮೊಬೈಲ್ ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಈ ಪ್ಯಾಕ್ ಎರಡು ವಿಶೇಷತೆಗಳನ್ನು ಹೊಂದಿದೆ.

ಕ್ರಿಕೆಟ್ ಸೀಸನ್ ಪ್ಯಾಕ್ ಅಡಿ ಲೈವ್ ಮೊಬೈಲ್ ಗೇಮಿಂಗ್ ಆಫರ್ ಕೂಡ ಜಿಯೋ ನೀಡ್ತಿದೆ. ಈ ಆಟವನ್ನು 11 ಭಾಷೆಗಳಲ್ಲಿ ಆಡಬಹುದಾಗಿದೆ. ಇದರಲ್ಲಿ ನೇರ ಸಂಭಾಷಣೆಗೂ ಅವಕಾಶವಿರುತ್ತದೆ. ಜೊತೆಗೆ ಬಹುಮಾನ ಕೂಡ ಗೆಲ್ಲಬಹುದಾಗಿದೆ.

ಐಪಿಎಲ್ ಆರಂಭದ ಜೊತೆ ರಿಲಾಯನ್ಸ್ ನ ಧನ್ ಧನಾ ಧನ್ ಲೈವ್ ಶೋ ಕೂಡ ಶುರುವಾಗಲಿದೆ. ಇದ್ರಲ್ಲಿ ಸೆಲೆಬ್ರಿಟಿ ಗೆಸ್ಟ್ ಗಳಿರಲಿದ್ದಾರೆ. ಈ ಶೋ ಕೇವಲ ಮೈ ಜಿಯೋ ಆ್ಯಪ್ ನಲ್ಲಿ ಮಾತ್ರ ಕಾಣಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...