alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷಾಂತ್ಯದಲ್ಲಿ ಮತ್ತೊಂದು ಧಮಾಕಾ ಮಾಡಲಿದೆ ಜಿಯೋ

ಮಾಧ್ಯಮಗಳ ವರದಿ ಪ್ರಕಾರ ವರ್ಷಾಂತ್ಯದಲ್ಲಿ ರಿಲಾಯನ್ಸ್ ಜಿಯೋ ಇನ್ನೊಂದು ದೊಡ್ಡ ಬಾಂಬ್ ಸಿಡಿಸಲಿದೆ. ವರ್ಷದ ಕೊನೆಯಲ್ಲಿ ಜಿಯೋ ಬ್ರಾಡ್ ಬ್ಯಾಂಡ್ ಸೇವೆಯನ್ನು ಶುರು ಮಾಡಲಿದೆ. 1000 ರೂಪಾಯಿಯಲ್ಲಿ ಕಂಪನಿ, ಗ್ರಾಹಕರಿಗೆ 100 ಎಂಬಿಪಿಎಸ್ ಇಂಟರ್ನೆಟ್, ವಿಡಿಯೋ ಹಾಗೂ ವಾಯ್ಸ್ ಕಾಲ್ ನೀಡಲಿದೆ.

ರಿಲಾಯನ್ಸ್ ಜಿಯೋ ಮೂಲಗಳು ಕೂಡ ಇದಕ್ಕೆ ಪುಷ್ಠಿ ನೀಡಿವೆ. ಜಿಯೋ ಬ್ರಾಡ್ ಬ್ಯಾಂಡ್ ಸೇವೆ ಶುರು ಮಾಡಲು ಭರ್ಜರಿ ತಯಾರಿ ನಡೆಸುತ್ತಿದೆ. ಆದ್ರೆ ಯಾವಾಗ ಸೇವೆ ಶುರುಮಾಡಲಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ಹೇಳಿವೆ.

ಮಾರುಕಟ್ಟೆಯಲ್ಲಿ ಈಗಿರುವ ಬ್ರಾಡ್ ಬ್ಯಾಂಡ್ ಸೇವೆಗಳಿಗಿಂತ ಜಿಯೋ ಬ್ರಾಡ್ ಬ್ಯಾಂಡ್ ಸೇವೆ ಶೇಕಡಾ 20ರಷ್ಟು ಅಗ್ಗವಾಗಿರಲಿದೆಯಂತೆ. ಅಂದ್ರೆ ಪ್ಲಾನ್ ಬೆಲೆ ಸಾವಿರ ರೂಪಾಯಿಗಿಂತ ಕಡಿಮೆಯಿರುವ ಸಾಧ್ಯತೆಯಿದೆ. ಜಿಯೋ ಈ ಸೇವೆಯ ಪರೀಕ್ಷೆಯನ್ನು 2016 ರಿಂದಲೇ ಮಾಡ್ತಿದೆ.

ಗ್ರಾಹಕರು ಇಂಟರ್ನೆಟ್ ಸೇವೆ, ಕಾಲಿಂಗ್, ವಿಡಿಯೋ ಕಾಲಿಂಗ್ ಜೊತೆ ಟಿವಿಯನ್ನು ಕೂಡ ನೋಡಬಹುದಾಗಿದೆ. ಜಿಯೋ ಸಿಮ್ ನಂತೆ ಬ್ರಾಡ್ ಬ್ಯಾಂಡ್ ಸೇವೆ ಕೂಡ ಮಾರುಕಟ್ಟೆಯನ್ನು ತಲ್ಲಣಗೊಳಿಸೋದ್ರಲ್ಲಿ ಸಂಶಯವಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...