alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿಗೆ ಜಿಯೋ ಕ್ಯಾಶ್ಬ್ಯಾಕ್ ಆಫರ್

ಟೆಲಿಕಾಂ ಕಂಪನಿಗಳ ಸ್ಪರ್ಧೆಯಲ್ಲಿ ಬಳಕೆದಾರರಿಗೆ ಲಾಭವಾಗ್ತಿದೆ. ಬುಧವಾರವಷ್ಟೇ ಏರ್ಟೆಲ್ ಜಿಯೋಗೆ ಟಕ್ಕರ್ ನೀಡಲು ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈಗ ಜಿಯೋ ದೀಪಾವಳಿಗಾಗಿ ಭರ್ಜರಿ ಆಫರ್ ನೀಡಿದೆ. ಧನ್ ಧನಾ ಧನ್ ಆಫರ್ ನಂತೆಯೇ ಹೊಸ ಆಫರ್ ಶುರುಮಾಡಿದೆ. ಈ ಆಫರ್ ನಲ್ಲಿ 399 ರೂಪಾಯಿ ರಿಚಾರ್ಜ್ ಮಾಡಿದ್ರೆ ಬಳಕೆದಾರನಿಗೆ ಶೇಕಡಾ 100ರಷ್ಟು ಕ್ಯಾಶ್ಬ್ಯಾಕ್ ಸೌಲಭ್ಯ ಸಿಗಲಿದೆ.

ಈ ಕ್ಯಾಶ್ಬ್ಯಾಕ್ ವೋಚರ್ ರೂಪದಲ್ಲಿ ಗ್ರಾಹಕರಿಗೆ ಸಿಗಲಿದೆ. ಇದನ್ನು ರಿಚಾರ್ಜ್ ಮಾಡುವಾಗ ಬಳಕೆದಾರರು ಬಳಸಿಕೊಳ್ಳಬೇಕಾಗುತ್ತದೆ. ಅಕ್ಟೋಬರ್ 12ರಿಂದ ಅಕ್ಟೋಬರ್ 18ರವರೆಗೆ ಬಳಕೆದಾರರು ಈ ಆಫರ್ ಲಾಭ ಪಡೆಯಬಹುದಾಗಿದೆ. ಕ್ಯಾಶ್ಬ್ಯಾಕ್ ವೋಚರನ್ನು ನೀವು ಅಕ್ಟೋಬರ್ 15ರ ನಂತ್ರ ಯಾವಾಗ ಬೇಕಾದ್ರೂ ಬಳಸಬಹುದಾಗಿದೆ.

ಡೇಟಾ ಪ್ಯಾಕ್ ಆ್ಯಕ್ಟಿವ್ ಇರುವ ಗ್ರಾಹಕರು ಕೂಡ ಈ ಆಫರ್ ಲಾಭ ಪಡೆಯಬಹುದಾಗಿದೆ. ಜಿಯೋ 399 ರೂಪಾಯಿಯ ಧನ್ ಧನಾ ಧನ್ ಪ್ರಿಪೇಡ್ ಗ್ರಾಹಕರಿಗೆ 84ಜಿಬಿ ಡೇಟಾ ನೀಡಲಿದೆ. 84 ದಿನಗಳ ಕಾಲ ಪ್ರತಿದಿನ ಬಳಕೆದಾರ 1ಜಿಬಿ ಡೇಟಾ ಬಳಸಿಕೊಳ್ಳಬಹುದಾಗಿದೆ. ಇದ್ರ ಜೊತೆಗೆ ಉಚಿತ ಎಸ್ ಎಂ ಎಸ್, ಉಚಿತ ಕರೆ ಸೌಲಭ್ಯ ಸಿಗಲಿದೆ. ಪೋಸ್ಟ್ ಪೇಯ್ಡ್ ಗ್ರಾಹಕರಿಗೂ ಈ ಸೌಲಭ್ಯವಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...