alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಾಯನ್ಸ್ ಶುರು ಮಾಡಿದೆ ಸಣ್ಣ ರಿಚಾರ್ಜ್ ಪ್ಲಾನ್

ರಿಲಾಯನ್ಸ್ ಜಿಯೋ ಇತ್ತೀಚಿಗಷ್ಟೇ 153 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಈಗ ಜಿಯೋ ಎರಡು ಸಣ್ಣ ರಿಚಾರ್ಜ್ ಯೋಜನೆಯನ್ನು ಜನರಿಗೆ ಪರಿಚಯಿಸಿದೆ. ಇದ್ರಲ್ಲಿ ಒಂದು 24 ರೂಪಾಯಿ ರಿಚಾರ್ಜ್ ಯೋಜನೆಯಾದ್ರೆ ಇನ್ನೊಂದು 54 ರೂಪಾಯಿ ರಿಚಾರ್ಜ್ ಯೋಜನೆಯಾಗಿದೆ.

24 ರೂಪಾಯಿ ಯೋಜನೆಯನ್ನು ಒಂದು ಷರತ್ತಿನೊಂದಿಗೆ ಜಿಯೋ ಶುರುಮಾಡಿದೆ. ಗ್ರಾಹಕ 24 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಹೈ ಸ್ಪೀಡ್ ನಲ್ಲಿ 500ಎಂಬಿ ಡೇಟಾ ಪ್ರತಿದಿನ ಲಭ್ಯವಾಗಲಿದೆ. ಹೈ ಸ್ಪೀಡ್ ಡೇಟಾ ಮಿತಿ ಮುಗಿಯುತ್ತಿದ್ದಂತೆ ಇಂಟರ್ನೆಟ್ ಜಾಲ್ತಿಯಲ್ಲಿರಲಿದೆ. ಆದ್ರೆ ವೇಗ ಮಾತ್ರ 64 kbps ಆಗಲಿದೆ. ಗ್ರಾಹಕರಿಗೆ ಇದ್ರಲ್ಲಿ ಅನಿಯಮಿತ ಕರೆ ಸಿಗಲಿದೆ. ಜೊತೆಗೆ ಉಚಿತವಾಗಿ 20 ಎಸ್ ಎಂ ಎಸ್ ಸಿಗಲಿದೆ. ಈ ಯೋಜನೆ ಮಾನ್ಯತೆ ಎರಡು ದಿನವಾಗಿದೆ.

ಇನ್ನು 54 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ ಹೈಸ್ಪೀಡ್ 500ಎಂಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಹಾಗೂ 70 ಉಚಿತ ಎಸ್ ಎಂ ಎಸ್ ಸಿಗಲಿದೆ. ಈ ಯೋಜನೆ ಮಾನ್ಯತೆ 7 ದಿನ. ಈ ಎರಡೂ ಯೋಜನೆ 1500 ರೂಪಾಯಿ ಮೊಬೈಲ್ ಪಡೆದವರ ಸಿಮ್ ಗೆ ಮಾತ್ರ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...