alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ಬಳಕೆದಾರರಿಗೆ ಗುಡ್ ನ್ಯೂಸ್…!

ದೇಶದ ಅತಿದೊಡ್ಡ ಸಿರಿವಂತ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಮೊಬೈಲ್ ಕ್ಷೇತ್ರವನ್ನು ಪ್ರವೇಶಿಸಿದ ಬಳಿಕ ಗ್ರಾಹಕರು ದರ ಸಮರದ ಭಾರೀ ಲಾಭವನ್ನು ಪಡೆದಿದ್ದರು. ಇದೀಗ ರಿಲಯನ್ಸ್ ಜಿಯೋ, ಬ್ರಾಡ್ ಬ್ಯಾಂಡ್ ಕ್ಷೇತ್ರವನ್ನು ಪ್ರವೇಶಿಸಿದ್ದು, ಮತ್ತೊಂದು ಸುತ್ತಿನ ದರ ಸಮರ ಆರಂಭವಾಗುವ ನಿರೀಕ್ಷೆಯಿದೆ.

ಆಗಸ್ಟ್ 15 ರಿಂದ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಆರಂಭವಾಗಲಿದ್ದು, ಆರಂಭಿಕ ಹಂತದಲ್ಲಿ 4,500 ರೂಪಾಯಿ ಭದ್ರತಾ ಠೇವಣಿಯನ್ನು ಪಡೆದು ಗ್ರಾಹಕರಿಗೆ ಮೂರು ತಿಂಗಳವರೆಗೆ 1 ಜಿಬಿಪಿಎಸ್ ಡೌನ್ ಲೋಡ್ ಹಾಗೂ 100 ಎಂಬಿಪಿಎಸ್ ಅಪ್ಲೋಡ್ ವೇಗದೊಂದಿಗೆ ಅನಿಯಮಿತ ಇಂಟರ್ನೆಟ್ ಸೇವೆಯನ್ನು ನೀಡಲಿದೆ.

ರಿಲಯನ್ಸ್ ಜಿಯೋದ ಈ ಸೇವೆ ಆರಂಭಿಕ ಹಂತದಲ್ಲಿ ಎಲ್ಲೆಡೆ ಲಭ್ಯವಾಗದಿದ್ದರೂ ಮುಂದಿನ ಹಂತದಲ್ಲಿ ಇದನ್ನು ವಿಸ್ತರಿಸಲಾಗುತ್ತದೆ. ಪ್ರತಿ ತಿಂಗಳ ಪ್ಯಾಕೇಜ್ ದರವನ್ನು ಇನ್ನೂ ನಿಗದಿಪಡಿಸಿಲ್ಲವಾದರೂ ಈ ದರ ಇತರ ಕಂಪನಿಗಳಿಗೆ ಹೋಲಿಸಿದರೆ ಆಕರ್ಷಕವಾಗಿರಲಿದೆ ಎನ್ನಲಾಗುತ್ತಿದೆ. ರಿಲಯನ್ಸ್ ಕಂಪನಿ ಬ್ರಾಡ್ ಬ್ಯಾಂಡ್ ಕ್ಷೇತ್ರವನ್ನು ಪ್ರವೇಶಿಸಿದ ಬಳಿಕ ಮತ್ತೊಮ್ಮೆ ದರ ಸಮರ ಆರಂಭವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...