alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗೆ ಸೆಡ್ಡು! ಏರ್ ಟೆಲ್ ನಿಂದ 93 ರೂ.ಗೆ ಭರ್ಜರಿ ಆಫರ್

ನವದೆಹಲಿ: ಜಿಯೋ ಸ್ಪರ್ಧೆಯನ್ನು ಎದುರಿಸುವ ನಿಟ್ಟನಲ್ಲಿ ಏರ್ ಟೆಲ್ ಭರ್ಜರಿ ಪ್ಲಾನ್ ಪರಿಚಯಿಸಿದ್ದು, 93 ರೂ.ಗೆ ಉಚಿತ ಕರೆಗಳು ಮತ್ತು 1 ಜಿ.ಬಿ. ಡೇಟಾ ನೀಡ್ತಿದೆ.

ರಿಲಯನ್ಸ್ ಜಿಯೋದ 98 ರೂ. ಪ್ಯಾಕ್ ಗೆ ಸೆಡ್ಡು ಹೊಡೆಯಲು ಏರ್ ಟೆಲ್ 93 ರೂ. ಪ್ಲಾನ್ ಪರಿಚಯಿಸಿದ್ದು, ಉಚಿತ ಸ್ಥಳೀಯ ಮತ್ತು ಎಸ್.ಟಿ.ಡಿ. ಕರೆಗಳು, 1 ಜಿ.ಬಿ. 3 ಜಿ/ 4 ಜಿ ಡೇಟಾವನ್ನು ನೀಡಲಿದೆ.

ಏರ್ ಟೆಲ್ 93 ರೂ. ಪ್ಯಾಕ್ ನಲ್ಲಿ ಅನಿಯಮಿತ ಉಚಿತ ಕರೆಗಳು, ದಿನಕ್ಕೆ 100 ಎಸ್.ಎಂ.ಎಸ್. 1 ಜಿ.ಬಿ. 4 ಜಿ /3 ಜಿ ಡೇಟಾ ಸೇರಿದಂತೆ ಹಲವು ಸೌಲಭ್ಯ ಒಳಗೊಂಡಿದೆ. ಪ್ಯಾಕ್ ನ ಅವಧಿ 10 ದಿನಗಳಾಗಿದ್ದು, ವಾಣಿಜ್ಯೇತರ ಬಳಕೆದಾರರಿಗೆ ಇದು ಅನ್ವಯವಾಗಲಿದೆ.

ಇತ್ತೀಚೆಗೆ ಜಿಯೋ ಹ್ಯಾಪಿ ನ್ಯೂಯರ್ 2018 ಯೋಜನೆ ಪರಿಚಯಿಸಿ ಪ್ರೀಪೇಯ್ಡ್ ಗ್ರಾಹಕರಿಗೆ ಹಲವು ಪ್ಲಾನ್ ನಲ್ಲಿ ಹೆಚ್ಚುವರಿ ಡೇಟಾ ಪರಿಚಯಿಸಿದೆ. ಏರ್ ಟೆಲ್ ಇದಕ್ಕೆ ಪ್ರತಿಯಾಗಿ 199 ರೂ. ಪ್ಯಾಕ್ ನಲ್ಲಿ 1 ತಿಂಗಳಿಗೆ 28 ಜಿ.ಬಿ. 4 ಜಿ ಡೇಟಾವನ್ನು ನೀಡ್ತಿದೆ. ವಾಣಿಜ್ಯೇತರ ಬಳಕೆಗಾಗಿ ಅನಿಯಮಿತ ಕರೆ ಸೌಲಭ್ಯ ಸೇರಿ ಸೌಲಭ್ಯ ನೀಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...