alex Certify
ಕನ್ನಡ ದುನಿಯಾ       Mobile App
       

Kannada Duniya

399 ರೂ.ರಿಚಾರ್ಜ್ ಮಾಡಿದ್ರೆ 2,599 ರೂ.ವರೆಗೆ ಕ್ಯಾಶ್ಬ್ಯಾಕ್

ರಿಲಾಯನ್ಸ್ ಜಿಯೋ ತನ್ನ ಪ್ರೈಂ ಸದಸ್ಯರಿಗೆ ಹೊಸ ಕೊಡುಗೆಯನ್ನು ಘೋಷಣೆ ಮಾಡಿದೆ. ಇದು ಕ್ಯಾಶ್ಬ್ಯಾಕ್ ಆಫರ್. ಇದ್ರ ಲಾಭವನ್ನು ಕೇವಲ ಜಿಯೋ ಪ್ರೈಂ ಸದಸ್ಯರು ಮಾತ್ರ ಪಡೆಯಬಹುದಾಗಿದೆ. ಕಂಪನಿ ಪ್ರಕಾರ ಗ್ರಾಹಕ 399 ಹಾಗೂ ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡಿದಲ್ಲಿ 2599 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ.

ರಿಲಾಯನ್ಸ್ ಜಿಯೋ ಪ್ರೈಂ ಸದಸ್ಯರು 399 ಹಾಗೂ ಅದಕ್ಕಿಂತ ಹೆಚ್ಚು ರೂಪಾಯಿಯ ರಿಚಾರ್ಜ್ ಮಾಡಿದ್ರೆ ಅವರಿಗೆ 400 ರೂಪಾಯಿ ವೋಚರ್ ನೀಡಲಿದೆ. ಇದ್ರ ಜೊತೆಗೆ ಜಿಯೋ ಡಿಜಿಟಲ್ ವಾಲೆಟ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದ್ರ ಅಡಿಯಲ್ಲಿ ಪ್ರತಿಯೊಂದು ರಿಚಾರ್ಜ್ ಗೂ 300 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ.

ಈ ಕ್ಯಾಶ್ಬ್ಯಾಕ್ ಆಫರ್ ಗಾಗಿ ರಿಲಾಯನ್ಸ್ ಪ್ರಮುಖ ಇ-ಕಾಮರ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದ್ರಲ್ಲಿ ರಿಚಾರ್ಜ್ ಮಾಡಿದ ಗ್ರಾಹಕರಿಗೆ 1899 ರೂಪಾಯಿ ವೋಚರ್ ಸಿಗಲಿದೆ. ಪಾರ್ಟನರ್ ವಾಲೆಟ್ ನಲ್ಲಿ ಅಮೆಜಾನ್ ಪೇ, ಪೇಟಿಎಂ, ಮೊಬಿಕ್ವಿಕ್, ಫೋನ್ ಪೇ, ಆಕ್ಸಿಸ್ ಪೇ ಹಾಗೂ ಫ್ರೀ ಚಾರ್ಜ್ ಸೇರಿದೆ. ಇದ್ರಲ್ಲಿ ನೀವು ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...