alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಹೊಸ ಆಫರ್ ನೀಡ್ತಿದೆ ಜಿಯೋ

ಜಿಯೊಫಿ ಪೋರ್ಟಬಲ್ 4 ಜಿ ರೌಟರ್ ಮಾರಾಟ ಹೆಚ್ಚಿಸಲು ಜಿಯೋ ಹೊಸ ಕ್ಯಾಶ್ಬ್ಯಾಕ್ ಯೋಜನೆ ಘೋಷಣೆ ಮಾಡಿದೆ. ಈ ಆಫರ್ ನಲ್ಲಿ ಗ್ರಾಹಕರಿಗೆ 500 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಈ ಕ್ಯಾಶ್ಬ್ಯಾಕ್ ನಂತ್ರ ಜಿಯೊಫಿ ಪೋರ್ಟಬಲ್ 4 ಜಿ ರೌಟರ್ ಬೆಲೆ 499 ರೂಪಾಯಿಯಾಗಲಿದೆ.

ಹಿಂದಿನ ವರ್ಷ ಸೆಪ್ಟೆಂಬರ್ ನಲ್ಲಿ ಕಂಪನಿ ಜಿಯೊಫಿ ಪೋರ್ಟಬಲ್ 4 ಜಿ ರೌಟರ್ ಬೆಲೆಯನ್ನು 1,999 ರೂಪಾಯಿಯಿಂದ 999 ರೂಪಾಯಿಗೆ ಇಳಿಸಿತ್ತು. ಈ ಕೊಡುಗೆ ಇಂದಿನಿಂದ ಅಂದ್ರೆ ಜುಲೈ 3 ರಿಂದ ಶುರುವಾಗಿದೆ. ಯಾವಾಗ ಕೊನೆ ದಿನಾಂಕ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಜಿಯೋಫಿ ಡೇಟಾಕಾರ್ಡ್ ಜಿಯೋ ಸ್ಟೋರ್ ನಲ್ಲಿ ಲಭ್ಯವಿದೆ. ಇ-ಕಾಮರ್ಸ್ ಕಂಪನಿಗಳಾದ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ನಲ್ಲಿಯೂ ಸಿಗಲಿದೆ. ಜಿಯೋಫಿ ಕ್ಯಾಶ್ಬ್ಯಾಕ್ ಆಫರ್ ಪಡೆಯ ಬಯಸುವ ಗ್ರಾಹಕರು ರೌಟರ್ ಜೊತೆ ಹೊಸ ಸಿಮ್ ಖರೀದಿ ಮಾಡಬೇಕು. ಇದನ್ನು ರೌಟರ್ ನಲ್ಲಿ ಬಳಸಲಾಗುವುದು. ಕನಿಷ್ಠ 199 ರೂಪಾಯಿ ಪ್ಲಾನ್ ರಿಚಾರ್ಜ್ ಮಾಡಬೇಕು. ಒಂದು ವರ್ಷದ ಹಣವನ್ನು ಒಂದೇ ಬಾರಿ ಪಾವತಿ ಮಾಡಬೇಕು. 12 ತಿಂಗಳ ನಂತ್ರ ಗ್ರಾಹಕರಿಗೆ 500 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ.

199 ರೂಪಾಯಿ ಪ್ಲಾನ್ ನಲ್ಲಿ ಎಸ್ ಎಂ ಎಸ್, ಉಚಿತ ವೈಸ್ ಕಾಲ್ ಜೊತೆ 25 ಜಿಬಿ ಡೇಟಾ ಲಭ್ಯವಿದೆ. ಜಿಯೋ ಆ್ಯಪ್ ನ ಚಂದಾದಾರತ್ವ ಕೂಡ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...