alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬದ ಸಂದರ್ಭದಲ್ಲಿ ಜಿಯೋ ಗ್ರಾಹಕರಿಗೆ ಬಂಪರ್ ಆಫರ್

ಭಾರತದ ಇಂಟರ್ನೆಟ್ ಲೋಕದ ಹೊಸ ಕ್ರಾಂತಿಯಾಗಿಬಿಟ್ಟಿದೆ ರಿಲಯನ್ಸ್ ಜಿಯೋ. ಟೆಲಿಕಾಂ ಲೋಕದಲ್ಲಿ ಹಲವು ಹೊಸತುಗಳಿಗೆ ಸಾಕ್ಷಿಯಾದ ರಿಲಯನ್ಸ್ ಜಿಯೋ ಈಗ ಹೊಸ ಪ್ಲಾನ್ ಗಳೊಂದಿಗೆ ಮತ್ತೆ ಗ್ರಾಹಕರಿಗೆ ಮೋಡಿ ಮಾಡೋಕೆ ಬಂದಿದೆ. ಹೊಸ ರೀಚಾರ್ಜ್ ಮತ್ತು ಡೇಟಾ ಪ್ಲಾನ್ ಗಳೊಂದಿಗೆ ರಿಲಯನ್ಸ್ ಜಿಯೋ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳೋ ಕೆಲಸಕ್ಕೆ ಮುಂದಾಗಿದೆ.

ವಾರ್ಷಿಕ ರೀಚಾರ್ಜ್ ಮತ್ತು ಡೇಟಾ ಪ್ಲಾನ್ ಗಳನ್ನ ಜಿಯೋ ಗ್ರಾಹಕರಿಗೆ ನೀಡ್ತಿದೆ. ಆ ಪ್ರಕಾರ 1699 ರೂಪಾಯಿಗಳ ವಾರ್ಷಿಕ ರೀಚಾರ್ಜ್ ಮತ್ತು ಡೇಟಾ ಪ್ಲಾನ್ ಜಾರಿಗೆ ತರಲಾಗಿದೆ. 1699 ರೂಪಾಯಿ ಕೊಟ್ಟು ವರ್ಷಕ್ಕೆ 547.5 ಜಿಬಿ ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ. ಅಷ್ಟೇ ಅಲ್ಲ. ದಿನಕ್ಕೆ 1.5 ಜಿಬಿ ಡೇಟಾ , ಅನ್ಲಿಮಿಟೆಡ್ ವಿಡಿಯೋ ಕಾಲ್ ಮತ್ತು ದಿನಕ್ಕೆ 100 ಎಸ್ಎಮ್ಎಸ್ ಗಳನ್ನ ಉಚಿತವಾಗಿ ನೀಡುತ್ತಿದೆ. ಎಲ್ಲಾ ಜಿಯೋ ಆಪ್ ಗಳ ಸೇವೆಯೂ ಈ ಪ್ಲಾನ್ ನಲ್ಲಿ ಉಚಿತವಾಗಿ ದೊರೆಯಲಿದೆ.

ಬಿಎಸ್ಎನ್ಎಲ್ ಹೊರತುಪಡಿಸಿದ್ರೆ ಇತರೆ ನೆಟ್ವರ್ಕ್ ಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪ್ರೀ ಪೇಯ್ಡ್ ಪ್ಲಾನ್ ಆಗಿದೆ. ಇದರ ಜೊತೆಗೆ 4999 ಮತ್ತು 9999 ರೂಪಾಯಿಗಳ ವಾರ್ಷಿಕ ಪ್ಲಾನ್ ಕೂಡ ಜಿಯೋ ಬಿಡುಗಡೆ ಮಾಡಿದೆ. ಇನ್ನು ದೀಪಾವಳಿಯ ಕೊಡುಗೆಯಾಗಿ ಜಿಯೋ 100 ರೂಪಾಯಿಗಿಂತ ಹೆಚ್ಚು ರೀಚಾರ್ಜ್ ಮಾಡಿಸುವ ಎಲ್ಲಾ ಗ್ರಾಹಕರಿಗೂ ಶೇಕಡಾ 100ರಷ್ಟು ಕ್ಯಾಶ್ ಬ್ಯಾಕ್ ಸೌಲಭ್ಯವನ್ನು ನೀಡಲಾಗಿದೆ. ರಿಲಯನ್ಸ್ ಡಿಜಿಟಲ್ ಕೂಪನ್ ಗಳಿಗೆ ಈ ಕ್ಯಾಶ್ ಬ್ಯಾಕ್ ಆಡ್ ಆನ್ ಆಗಲಿದೆ. ಮೈ ಜಿಯೋ ಆಪ್ನಲ್ಲಿ ಈ ಕೂಪನ್ ಗಳು ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...