alex Certify
ಕನ್ನಡ ದುನಿಯಾ       Mobile App
       

Kannada Duniya

300 ರೂ. ಗಿಂತ ಕಡಿಮೆ ಬೆಲೆಯ ಜಿಯೋ ಧಮಾಕಾ ಪ್ಲಾನ್

ಭಾರತದ ಅತಿ ದೊಡ್ಡ ದೂರಸಂಪರ್ಕ ಕಂಪನಿ ರಿಲಾಯನ್ಸ್ ಜಿಯೋ ಮತ್ತೊಂದಿಷ್ಟು ಧಮಾಕಾ ಪ್ಲಾನ್ ಬಿಡುಗಡೆ ಮಾಡಿದೆ. ಕಂಪನಿ 300 ರೂಪಾಯಿಗಿಂತ ಕಡಿಮೆ ಬೆಲೆಯ ಕೆಲ ಪ್ಲಾನ್ ಶುರು ಮಾಡಿದ್ದು, ಗ್ರಾಹಕರನ್ನು ಖುಷಿಗೊಳಿಸಿದೆ.

ಜಿಯೋ ಗ್ರಾಹಕರಿಗಾಗಿ 149 ರೂಪಾಯಿ ಪ್ಲಾನ್ ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ದಿನ 1.5 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದ್ದು, ಗ್ರಾಹಕರಿಗೆ ಅನಿಯಮಿತ ಕರೆ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಸೌಲಭ್ಯ ಸಿಗಲಿದೆ.

ಜಿಯೋ 198 ರೂಪಾಯಿಯ ಇನ್ನೊಂದು ಪ್ಲಾನ್ ಕೂಡ ಬಿಡುಗಡೆ ಮಾಡಿದೆ. ಇದು 28 ದಿನಗಳ ಸಿಂಧುತ್ವ ಹೊಂದಿದ್ದು, ಗ್ರಾಹಕರಿಗೆ 2 ಜಿಬಿ ಡೇಟಾ ಪ್ರತಿದಿನ ಸಿಗಲಿದೆ. ಅನಿಯಮಿತ ಕರೆ ಜೊತೆ 100 ಎಸ್ಎಂಎಸ್ ಲಭ್ಯವಾಗಲಿದೆ.

300 ರೂಪಾಯಿ ಒಳಗಿನ ಇನ್ನೊಂದು ಪ್ಲಾನ್ 299 ರೂಪಾಯಿಯದ್ದು. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 3 ಜಿಬಿ ಡೇಟಾ ಸಿಗಲಿದೆ. 28 ದಿನಗಳ ಸಿಂಧುತ್ವ ಹೊಂದಿರುವ ಈ ಪ್ಲಾನ್ ನಲ್ಲಿ 100 ಎಸ್ಎಂಎಸ್ ಪ್ರತಿದಿನ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...