alex Certify
ಕನ್ನಡ ದುನಿಯಾ       Mobile App
       
Kannada Duniya

ಪ್ರಯಾಣಿಕರಿಗೆ ಶಾಕ್ ಕೊಟ್ಟ ಜೆಟ್ ಏರ್ ವೇಸ್

jet-a

ಮಂಗಳೂರು: ಮಂಗಳೂರು-ಶಾರ್ಜಾ ನಡುವೆ ಪ್ರತಿದಿನ ಸಂಚರಿಸುತ್ತಿದ್ದ ಜೆಟ್ ಏರ್ ವೇಸ್ ವಿಮಾನವನ್ನು ರದ್ದುಪಡಿಸಲಾಗಿದೆ.

3 ತಿಂಗಳ ಕಾಲ ಸಂಚಾರವನ್ನು ರದ್ದುಪಡಿಸಲು ಜೆಟ್ ಏರ್ ವೇಸ್ ತೀರ್ಮಾನಿಸಿದ್ದು, ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ.

5 ತಿಂಗಳ ಹಿಂದಷ್ಟೇ ಮಂಗಳೂರು-ಶಾರ್ಜಾ ನಡುವೆ ಸಂಚಾರ ಆರಂಭಿಸಲಾಗಿತ್ತು. ಬೋಯಿಂಗ್ 737 ವಿಮಾನ ಯಾನವನ್ನು ಜನವರಿ 8 ರಿಂದಲೇ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

3 ತಿಂಗಳ ಕಾಲ ರದ್ದುಪಡಿಸುವುದಾಗಿ ಹೇಳಲಾಗಿದ್ದರೂ, ಶಾಶ್ವತವಾಗಿ ರದ್ದಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವಿಮಾನ ಜನವರಿ 16 ರಿಂದ ಪ್ರತಿದಿನ ಮಂಗಳೂರು-ದೆಹಲಿ ನಡುವೆ ಸಂಚರಿಸಲಿದೆ ಎಂದು ಹೇಳಲಾಗಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...
ಪ್ರಯಾಣಿಕರಿಗೆ ಶಾಕ್ ಕೊಟ್ಟ ಜೆಟ್ ಏರ್ ವೇಸ್ | Kannada Dunia | Kannada News | Karnataka News | India News