alex Certify
ಕನ್ನಡ ದುನಿಯಾ       Mobile App
       

Kannada Duniya

ಬರೋಬ್ಬರಿ 30 ಲಕ್ಷ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟ ಪ್ರಯಾಣಿಕರು

ಜೆಟ್ ಏರ್‌ವೇಸ್ ನ ಸಿಬ್ಬಂದಿ ಬೇಜವ್ದಾರಿಯಿಂದ ಪ್ರಯಾಣಿಕರ ಕಿವಿ, ಮೂಗಿನಲ್ಲಿ‌ ರಕ್ತ ಸೋರಿದ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯಾಣಿಕರು ಭಾರಿ ಮೊತ್ತದ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಗುರುವಾರ ಮುಂಬಯಿ- ಜೈಪುರ ಮಧ್ಯೆ ವಿಮಾನ ಹಾರಾಟದ ವೇಳೆ, ಪೈಲಟ್ ಕ್ಯಾಬಿನ್ ಒಳಗಿನ ಒತ್ತಡವನ್ನು ಸರಿದೂಗಿಸುವ ಸ್ವಿಚ್ ಹಾಕುವುದನ್ನು ಮರೆತಿದ್ದರಿಂದ,‌ 30ಕ್ಕೂ ಹೆಚ್ಚು ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತ ಸುರಿದು ಆತಂಕ ಸೃಷ್ಟಿಸಿತ್ತು. ಆಸ್ಪತ್ರೆಗೆ ದಾಖಲಾಗಿರುವ ಪ್ರಯಾಣಿಕರು ಇದೀಗ 30 ಲಕ್ಷ ಪರಿಹಾರ ಹಾಗೂ 100 ಅಪ್ ಗ್ರೇಡ್ ವೋಚರ್ ನೀಡಬೇಕೆಂದು ಜೆಟ್ ಏರ್‌ವೇಸ್ ಸಿಬ್ಬಂದಿಗೆ ಆಗ್ರಹಿಸಿದ್ದಾರೆ.

ಸದ್ಯ ಅಮೆರಿಕಾದಲ್ಲಿರುವ ಒಬ್ಬ ಪ್ರಯಾಣಿಕನಿಗೆ ಮುಂದಿನ ಐದು ದಿನಗಳ‌ ಕಾಲ ವಿಮಾನ ಪ್ರಯಾಣ ಮಾಡದಂತೆ‌ ವೈದ್ಯರು ಸಲಹೆ ನೀಡಿದ್ದು, ಆ ವ್ಯಕ್ತಿಯೇ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.

ಇದರೊಂದಿಗೆ ಎಕಾನಮಿ‌ ಕ್ಲಾಸ್ ಮೊತ್ತ‌ ಬಿಸಿನೆಸ್ ಕ್ಲಾಸ್ ಸೀಟು ನೀಡುವ 100 ವೋಚರ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.

ಒಂದು ವೇಳೆ ಈ ಪರಿಹಾರ ಮೊತ್ತವನ್ನು ನೀಡದಿದ್ದರೆ, ಪೈಲೆಟ್ ಮಾಡಿದ ಎಡವಟ್ಟಿನ ವಿಡಿಯೋ ಬಹಿರಂಗಗೊಳಿಸುವುದಾಗಿ ಪ್ರಯಾಣಿಕರೊಬ್ಬರು ಆಡಳಿತ ಮಂಡಳಿಗೆ ಎಚ್ಚರಿಸಿದ್ದಾರೆ ಎಂದು‌ ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...