alex Certify
ಕನ್ನಡ ದುನಿಯಾ       Mobile App
       

Kannada Duniya

ಜೆಟ್ ಏರ್‌ವೇಸ್‌ನಿಂದ 25 ಲಕ್ಷ ಸೀಟುಗಳಿಗೆ ಡಿಸ್ಕೌಂಟ್

ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ಹಿಂದೆಂದೂ ಕಂಡರಿಯದ ಭಾರೀ ಡಿಸ್ಕೌಂಟ್‌ನಲ್ಲಿ ವಿಮಾನ ಟಿಕೆಟ್‌ಗಳನ್ನು ಮಾರುತ್ತಿದೆ.

25 ಲಕ್ಷ ಸೀಟುಗಳನ್ನು ಸುಮಾರು ಮೂರನೇ ಒಂದರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಮಂಗಳವಾರ ಘೋಷಿಸಿದೆ. ಇದು ತನ್ನ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳಿಗೆ ಸೀಮಿತ ಅವಧಿಗೆ ಅನ್ವಯವಾಗಲಿದೆ ಎಂದು ಅದು ಹೇಳಿಕೊಂಡಿದೆ.

ಆಫರ್ ಸೀಟುಗಳನ್ನು ಮಂಗಳವಾರದಿಂದ 6 ದಿನಗಳೊಳಗೆ ಬುಕ್ ಮಾಡಬೇಕು. ಬ್ಯುಸಿನೆಸ್, ಎಕಾನಮಿ ಎರಡೂ ದರ್ಜೆಯ ಪ್ರಯಾಣಕ್ಕೆ ಇದು ಅನ್ವಯವಾಗುತ್ತದೆ. ಪ್ರಯಾಣದ ಅವಧಿಯು ಸೆಪ್ಟೆಂಬರ್ 10 ರ ನಂತರ ಆರಂಭಗೊಳ್ಳಲಿದೆ ಎಂದು ಜೆಟ್ ಏರ್‌ವೇಸ್ ಹೇಳಿದೆ.

ನರೇಶ್ ಗೋಯಲ್ ಮಾಲೀಕತ್ವದ ಜೆಟ್ ಏರ್‌ವೇಸ್ ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 1,300 ಕೋಟಿ ರೂ. ನಷ್ಟ ದಾಖಲಿಸಿತ್ತು. ಜೆಟ್ ಇಂಧನ ವೆಚ್ಚ ಏರಿಕೆ, ರುಪಾಯಿ ಮೌಲ್ಯ ಕುಸಿತ ಹಾಗೂ ಅಗ್ಗದ ಟಿಕೆಟ್ ದರಗಳು ಈ ನಷ್ಟಕ್ಕೆ ಕಾರಣವಾಗಿದ್ದವು. ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಈ ವಿಮಾನಯಾನ ಸಂಸ್ಥೆ ಕಾರ್ಯವಾಹಿ ಬಂಡವಾಳ ಸಂಗ್ರಹಿಸಲು ಮಾರ್ಗೋಪಾಯ ಹುಡುಕುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...