alex Certify
ಕನ್ನಡ ದುನಿಯಾ       Mobile App
       

Kannada Duniya

ಆಟಿಕೆಯಲ್ಲ, ಇದು ಪುಟ್ಟ ಸ್ಮಾರ್ಟ್ ಫೋನ್….

jellytweet_1493809768459

ಚಿಕ್ಕದಾದ ಈ ಡಿವೈಸ್ ಹೆಸರು ಜೆಲ್ಲಿ, ಇದೊಂದು ಸ್ಮಾರ್ಟ್ ಫೋನ್. ಆ್ಯಂಡ್ರಾಯ್ಡ್ 7.0 ನೌಗಟ್, ಡ್ಯೂಯಲ್ ಸಿಮ್ ಆಪ್ಷನ್ ಹೊಂದಿದೆ. 4ಜಿ ಕನೆಕ್ಟಿವಿಟಿಯನ್ನೂ ಸಪೋರ್ಟ್ ಮಾಡುತ್ತೆ. ಚೀನಾದ ಶಾಂಘೈನಲ್ಲಿರೋ ಯುನಿಹರ್ಡ್ಸ್ ಸಂಸ್ಥೆ ಈ ಪುಟಾಣಿ ಸ್ಮಾರ್ಟ್ ಫೋನನ್ನು ತಯಾರಿಸಿದೆ.

ಜಗತ್ತಿನ ಅತ್ಯಂತ ಚಿಕ್ಕದಾದ 4ಜಿ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಇದಾಗಿದೆ. ಚಿಕ್ಕ ಪರ್ಸ್ ನಲ್ಲಿ ಕೂಡ ಇದನ್ನು ಇಟ್ಟುಕೊಳ್ಳಬಹುದು. ಯಾಕಂದ್ರೆ ಈ ಮೊಬೈಲ್ ಡಿಸ್ ಪ್ಲೇ ಕೇವಲ 2.45 ಇಂಚಿದೆ. ಶರ್ಟ್ ಜೇಬಿನಲ್ಲಿ ಕೂಡ ಹಿಡಿಸುವಷ್ಟು ಚಿಕ್ಕದಾಗಿದೆ. ಪರ್ಲ್ ವೈಟ್, ಸ್ಕೈ ಬ್ಲೂ ಮತ್ತು ಸ್ಪೇಸ್ ಬ್ಲಾಕ್ ಬಣ್ಣಗಳಲ್ಲಿ ಜೆಲ್ಲಿ ಸ್ಮಾರ್ಟ್ ಫೋನ್ ಲಭ್ಯವಿದೆ.

1 ಜಿಬಿ RAM, 8 ಜಿಬಿ ಸ್ಟೋರೇಜ್ ನ ಜೆಲ್ಲಿ ಮೊಬೈಲ್ ಬೆಲೆ ಸರಿಸುಮಾರು 6,900 ರೂಪಾಯಿ. 2 ಜಿಬಿ RAM, 16 ಜಿಬಿ ಸ್ಟೋರೇಜ್ ಹೊಂದಿರೋ ಮೊಬೈಲ್ ಗೆ 8000 ರೂಪಾಯಿ ನಿಗದಿ ಮಾಡಲಾಗಿದೆ. ಜೆಲ್ಲಿ ಮತ್ತು ಜೆಲ್ಲಿ ಪ್ರೋ ಹ್ಯಾಂಡ್ ಸೆಟ್ ಗಳ ಬೆಲೆಯನ್ನು ತಲಾ 59 ಡಾಲರ್ ಮತ್ತು 75 ಡಾಲರ್ ನಿಗದಿ ಮಾಡಲಾಗಿದೆ.

ಜೆಲ್ಲಿ ಸ್ಮಾರ್ಟ್ ಫೋನ್ 8 ಮೆಗಾಪಿಕ್ಸಲ್ ಕ್ಯಾಮರಾ ಹೊಂದಿದೆ. 950 mAh ಬ್ಯಾಟರಿ ಹೊಂದಿದ್ದು, ಆಗಸ್ಟ್ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...