alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಶುರುವಾಯ್ತು ಜಾವಾ ಹವಾ…!

ಒಂದು ಕಾಲದಲ್ಲಿ ಭಾರತೀಯ ರಸ್ತೆಗಳಲ್ಲಿ ಅಬ್ಬರಿಸಿದ್ದ ಜಾವಾ ಮತ್ತೆ ಭಾರತಕ್ಕೆ ವಾಪಸ್ ಆಗಿದೆ. ಕಂಪನಿ ತನ್ನ ಮೂರು ಮೋಟರ್ ಸೈಕಲ್ ಮಾಡೆಲ್ ಗಳನ್ನು ಭಾರತಕ್ಕೆ ಪರಿಚಯಿಸಿದೆ. ಇದ್ರಲ್ಲಿ ಎರಡು ಮಾಡೆಲ್ 293 ಸಿಸಿ ಇಂಜಿನ್ ಲೆನ್ಸ್ ಹೊಂದಿದೆ. ಜಾವಾ ಪರ್ಕ್ 334 ಸಿಸಿ ಇಂಜಿನ್ ಲೆನ್ಸ್ ಹೊಂದಿದೆ.

1996ರ ನಂತ್ರ ಜಾವಾ ಭಾರತದಲ್ಲಿ ವ್ಯಾಪಾರ ನಿಲ್ಲಿಸಿತ್ತು. ಮಹೀಂದ್ರಾ ಅಂಡ್ ಮಹೀಂದ್ರಾ ಜೊತೆ ಒಪ್ಪಂದ ಮಾಡಿಕೊಂಡ ಮೇಲೆ ಮತ್ತೆ ಭಾರತದಲ್ಲಿ ಜಾವಾ ಹವಾ ಶುರುವಾಗಿದೆ. ಜಾವಾ ಬೈಕ್ ಬುಕ್ಕಿಂಗ್ ಇಂದಿನಿಂದಲೇ ಶುರುವಾಗಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಜಾವಾ ಹಾಗೂ ಜಾವಾ 45 ಬೈಕನ್ನು ನವೆಂಬರ್ 15ರಂದು ಬಿಡುಗಡೆ ಮಾಡಿದೆ. ಆದ್ರೆ ಗ್ರಾಹಕರ ಕೈಗೆ ಬೈಕ್ 2019ರಲ್ಲಿ ಸಿಗಲಿದೆ. 80-90ರ ದಶಕದ ನೆನಪು ಬರುವಂತೆ ಮೋಟಾರ್ ಸೈಕಲ್ ವಿನ್ಯಾಸ ಮಾಡಲಾಗಿದೆ. ಜಾವಾ ಹೊಸ ವಿನ್ಯಾಸ ಬೈಕ್ ಸವಾರರಿಗೆ ಇಷ್ಟವಾಗಿದೆ.

ದೆಹಲಿ ಶೋರೂಂನಲ್ಲಿ ಜಾವಾ ಬೈಕ್ ಬೆಲೆ 1.64 ಲಕ್ಷ ರೂಪಾಯಿಯಾಗಿದೆ. ಜಾವಾ 42 ಬೈಕ್ ಗ್ರಾಹಕರಿಗೆ 1.55 ಲಕ್ಷಕ್ಕೆ ಸಿಗಲಿದೆ. ಜಾವಾ ಪೆರಾಕ್ ಬೈಕ್ 1.89 ಲಕ್ಷ ರೂಪಾಯಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...