alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖ ಗುರುತಿಸುವಿಕೆ ಸೌಲಭ್ಯವುಳ್ಳ ಈ ಮೊಬೈಲ್ ಬೆಲೆ ಕೇವಲ 3,999 ರೂ.

ಚೀನಾ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ iVOOMi ಎಂಟ್ರಿ ಲೆವಲ್ ಮಟ್ಟದ iVOOMi iPro ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. 18:9 ಫುಲ್ ವ್ಯೂ ಡಿಸ್ಪ್ಲೇ ಹೊಂದಿರುವ ಭಾರತದ ಬಜೆಟ್ ಸ್ಮಾರ್ಟ್ಫೋನ್ ಇದು ಎಂದು ಕಂಪನಿ ಹೇಳಿದೆ. ಈ ಸ್ಮಾರ್ಟ್ಫೋನ್ ಬೆಲೆ 3,999 ರೂಪಾಯಿ.

iVOOMi iPro ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ನಲ್ಲಿ ಮಾತ್ರ ಲಭ್ಯವಾಗಲಿದೆ. ಈಗಾಗಲೇ ಇದ್ರ ಮಾರಾಟ ಶುರುವಾಗಿದೆ. ಬಿಡುಗಡೆ ಆಫರ್ ಆಗಿ ಕಂಪನಿ, ಜಿಯೋ ಗ್ರಾಹಕರಿಗೆ 2,200 ರೂಪಾಯಿಯವರೆಗೆ ಕ್ಯಾಶ್ ಬ್ಯಾಕ್ ನೀಡ್ತಿದೆ. ಈ ಆಫರ್ ಪಡೆಯಲು ಗ್ರಾಹಕರು ಪ್ರತಿ ತಿಂಗಳು 198 ಅಥವಾ 299 ರಿಚಾರ್ಜ್ ಮಾಡಬೇಕು.

ಈ ಸ್ಮಾರ್ಟ್ಫೋನ್ ಗೆ 1.3GHz ಕ್ವಾಡ್-ಕೋರ್ ಪ್ರೊಸೆಸರ್ ನೀಡಲಾಗಿದೆ. Android Oreo 8.1 ನಲ್ಲಿ ಕಾರ್ಯ ನಿರ್ವಹಿಸಲಿದೆ. ಸ್ಮಾರ್ಟ್ಫೋನ್ ಸ್ಕ್ರೀನ್ ಒಡೆಯೋದಿಲ್ಲವೆಂದಿದೆ. 1ಜಿಬಿ ರ್ಯಾಮ್ ಜೊತೆ 8ಜಿಬಿ ಇಂಟರ್ನಲ್ ಮೆಮೋರಿ ನೀಡಲಾಗಿದೆ. ಇದನ್ನು 128 ಜಿಬಿಯವರೆಗೆ ವಿಸ್ತರಿಸಬಹುದಾಗಿದೆ. 5 ಮೆಗಾಪಿಕ್ಸಲ್ ರಿಯರ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ನೀಡಲಾಗಿದೆ. ಈ ಮೊಬೈಲ್ ಮುಖ ಗುರುತಿಸುವಿಕೆ ಲಾಕ್ ಸಿಸ್ಟಂ ಕೂಡ ಹೊಂದಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...