alex Certify
ಕನ್ನಡ ದುನಿಯಾ       Mobile App
       

Kannada Duniya

ಆದಾಯ ತೆರಿಗೆ ಪಾವತಿಸಲು ಗಡುವು ವಿಸ್ತರಣೆ

ಕೇಂದ್ರ ಸರ್ಕಾರ ಕೇರಳ ವಾಸಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಪ್ರವಾಹ ಹಿನ್ನೆಲೆಯಲ್ಲಿ ಆದಾಯ ತೆರಿಗೆಯನ್ನು ಪಾವತಿಸಲು ನೀಡಿದ್ದ ಆಗಸ್ಟ್ 31 ರ ಗಡುವು ವಿಸ್ತರಿಸಿದ್ದು, ಕೇರಳಿಗರಿಗೆ 15 ದಿನ ಹೆಚ್ಚುವರಿ ಅವಧಿ ನೀಡಿದೆ.

ಐಟಿಆರ್ ಸಲ್ಲಿಸಲು ಇದೇ ಆಗಸ್ಟ್ 31 ರಂದು ಕೊನೆಯ ದಿನವಾಗಿತ್ತು. ಅಲ್ಲದೆ ಗಡುವು ಮೀರಿದ್ರೆ ದಂಡ ವಾವತಿಸಬೇಕಾಗುತ್ತದೆ ಎಂದು ಹಣಕಾಸು ಇಲಾಖೆ ಸೂಚಿಸಿತ್ತು. ಜಲಪ್ರಳಯದಿಂದ ನಲುಗಿರುವ ಕೇರಳಕ್ಕೆ ಆಗಸ್ಟ್ 31ರ ವರೆಗೆ ನೀಡಿದ ಗಡುವು ಸಾಲದು ಎಂಬುದನ್ನು ಮನವರಿಕೆ ಮಾಡಿಕೊಂಡ ಕೇಂದ್ರ, ಕೇರಳ ಜನತೆ ಐಟಿಆರ್ ಸಲ್ಲಿಸಲು ಸೆಪ್ಟಂಬರ್ 15ರ ವರೆಗೂ ಕಾಲಾವಕಾಶ ನೀಡಿದೆ.

ಕೇರಳ ತೆರಿಗೆದಾರರು ಕೇಂದ್ರ ಸರ್ಕಾರಕ್ಕೆ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದರು. ಮನವಿಗೆ ಸಮ್ಮತಿಸಿದ ಕೇಂದ್ರ ಸರ್ಕಾರ ಅವಧಿಯನ್ನು ಸೆಪ್ಟಂಬರ್ 15ರ ವರೆಗೆ ವಿಸ್ತರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...