alex Certify
ಕನ್ನಡ ದುನಿಯಾ       Mobile App
       

Kannada Duniya

ಆದಾಯ ತೆರಿಗೆ ಪಾವತಿಸಿದ್ರೂ ಬರಬಹುದು ನೋಟಿಸ್!

ಸರಿಯಾದ ಸಮಯಕ್ಕೆ ಆದಾಯ ತೆರಿಗೆ ಪಾವತಿ ಮಾಡಿದ್ದರೂ ಇಲಾಖೆಯಿಂದ ನಿಮಗೆ ನೋಟಿಸ್ ಬರುತ್ತಲೇ ಇರುತ್ತದೆ. ಅದು ಕಾಮನ್ ಅಂದುಕೊಂಡು ಸುಮ್ಮನಾಗಬೇಡಿ. ಸೆಕ್ಷನ್ 139 (9) ಅಡಿಯಲ್ಲಿ ಕಳುಹಿಸಿದ ನೋಟಿಸ್ ಅದಾಗಿದ್ದರೆ ದೋಷಯುಕ್ತ ರಿಟರ್ನ್ ಕುರಿತಾಗಿರುತ್ತದೆ.

ತರಾತುರಿಯಲ್ಲಿ ನಿಮ್ಮಿಂದ ಏನಾದರೂ ಪ್ರಮಾದ ಆಗಿರುವ ಸಾಧ್ಯತೆ ಇರುತ್ತದೆ. ಒಮ್ಮೆ ಐಟಿ ರಿಟರ್ನ್ ಮಾಡಿದಾಕ್ಷಣ ನಿಮ್ಮ ಕೆಲಸ ಮುಗೀತು ಎಂದರ್ಥವಲ್ಲ. ಅದನ್ನು ಕೂಲಂಕುಷವಾಗಿ ಪರಿಶೀಲಿಸಿ ಏನಾದರೂ ತಪ್ಪುಗಳಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸುತ್ತದೆ.

ನೋಟಿಸ್ ಬಂದಿದೆ ಅಂದಾಕ್ಷಣ ಗಾಬರಿ ಬೀಳುವ ಅಗತ್ಯವಿಲ್ಲ. ಎಲ್ಲಿ ತಪ್ಪಾಗಿದೆ ಅಂತಾ ಪರಿಶೀಲಿಸಿ ಮತ್ತೆ ರಿಟರ್ನ್ ಫೈಲ್ ಮಾಡಬಹುದು. ಇದಕ್ಕಾಗಿ ನಿಮಗೆ ಆದಾಯ ತೆರಿಗೆ ಇಲಾಖೆ 15 ದಿನಗಳ ಕಾಲಾವಕಾಶ ನೀಡುತ್ತದೆ. ನೀವು ಇಮೇಲ್ ಅನ್ನು ಗಮನಿಸದೇ ಹೋದಲ್ಲಿ ನಿಮ್ಮ ರಿಟರ್ನ್ ಇನ್ ವ್ಯಾಲಿಡ್ ಎನಿಸಿಕೊಳ್ಳುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...