alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆಯ ಬ್ಲಾಕ್ ಬೆರ್ರಿ ಫೋನ್ ಗೆ ಗುಡ್ ಬೈ ಹೇಳೋ ಸಮಯ….

ಬ್ಲಾಕ್ ಬೆರ್ರಿ ಹಿಂದೊಮ್ಮೆ ಮೊಬೈಲ್ ಜಗತ್ತನ್ನೇ ಆಳಿದ್ದ ಕಂಪನಿ. ಆದ್ರೀಗ ಬ್ಲಾಕ್ ಬೆರ್ರಿ ಮೊಬೈಲ್ ಗಳು ಇತಿಹಾಸದ ಪುಟ ಸೇರುತ್ತಿವೆ. 2019ರ ಡಿಸೆಂಬರ್ ವೇಳೆಗೆ ಬ್ಲಾಕ್ ಬೆರ್ರಿ ಆ್ಯಪ್ ಸ್ಟೋರ್ ಬಂದ್ ಮಾಡುವುದಾಗಿ ಕಂಪನಿ ಹೇಳಿದೆ.

2015ರಲ್ಲಿ ಬ್ಲಾಕ್ ಬೆರ್ರಿ BBOSನಿಂದ ಆ್ಯಂಡ್ರಾಯ್ಡ್ ಗೆ ಶಿಫ್ಟ್ ಆಗಿತ್ತು. ಅದಾದ್ಮೇಲೆ ಮೊಬೈಲ್ ಫೋನ್ ಗಳ ತಯಾರಿಕೆಯನ್ನೇ ನಿಲ್ಲಿಸಿತ್ತು. ಸಂಪೂರ್ಣ ಸೆಕ್ಯೂರಿಟಿ ಸಾಫ್ಟ್ ವೇರ್ ಅಭಿವೃದ್ಧಿಪಡಿಸುವತ್ತ ಗಮನ ಹರಿಸಿತ್ತು.

ಬ್ಲಾಕ್ ಬೆರ್ರಿ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇಲ್ಲ. 2017ರಲ್ಲಿ ಕೇವಲ 200,000ಮೊಬೈಲ್ ಗಳು ಮಾರಾಟವಾಗಿವೆ. ಅಂದ್ರೆ ಜಾಗತಿಕ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ.1ರಷ್ಟು ಪಾಲನ್ನು ಕೂಡ ಹೊಂದಿಲ್ಲ.

ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಬ್ಲಾಕ್ ಬೆರ್ರಿ ಟ್ರಾವೆಲ್ ಮತ್ತು ಪ್ಲೇ ಬುಕ್ ಆ್ಯಪ್ ಗಳು ಬಂದ್ ಆಗಲಿವೆ. ನಂತರ ಬಳಕೆದಾರರು ಬಿಬಿ ಡಿವೈಸ್ ಮೂಲಕ ಟ್ರಾವೆಲ್ ಬುಕ್ಕಿಂಗ್ ಮಾಡಬಹುದು. ಪ್ಲೇ ಬುಕ್, ವಿಡಿಯೋ ಕಾನ್ಫರೆನ್ಸ್ ಆಪ್ಷನ್ ನೀಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...