alex Certify
ಕನ್ನಡ ದುನಿಯಾ       Mobile App
       

Kannada Duniya

ಟಿಸಿಎಸ್ ಮುಖ್ಯಸ್ಥರಾಗಿ ಇಶಾತ್ ಹುಸೇನ್

tcs

ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ನ ಮುಖ್ಯಸ್ಥರಾಗಿ ಇಶಾತ್ ಹುಸೇನ್ ಅಧಿಕಾರ ಸ್ವೀಕರಿಸಿದ್ದಾರೆ. ಸೈರಸ್ ಮಿಸ್ತ್ರಿ ಅವರ ಪದಚ್ಯುತಿಯಿಂದ ತೆರವಾಗಿದ್ದ ಸ್ಥಾನವನ್ನು ಇಶಾತ್ ತುಂಬಿದ್ದಾರೆ. ನೂತನ ಚೇರ್ಮನ್ ನೇಮಕವಾಗುವವರೆಗೆ ಇಶಾತ್ ಹುಸೇನ್ ಕಾರ್ಯ ನಿರ್ವಹಿಸಲಿದ್ದಾರೆ ಅಂತಾ ಟಿಸಿಎಸ್ ತಿಳಿಸಿದೆ. ಟಾಟಾ ಕಂಪನಿಯ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಲ್ಲದೆ ನಷ್ಟವಾಗುವಂತಹ ನಿರ್ಧಾರ ತೆಗೆದುಕೊಂಡಿದ್ದರಿಂದ ಸೈರಸ್ ಮಿಸ್ತ್ರಿ ಅವರನ್ನು ಕೈಬಿಟ್ಟಿರೋದಾಗಿ ಹೇಳಲಾಗಿತ್ತು.

ಜೊತೆಗೆ ಟಾಟಾ ನ್ಯಾನೋ ಪ್ರಾಜೆಕ್ಟ್ ಅನ್ನು ಬಂದ್ ಮಾಡಲು ಮಿಸ್ತ್ರಿ ಯೋಜಿಸಿದ್ದರು, ಅದರಿಂದ ಅಸಮಾಧಾನಗೊಂಡ ರತನ್ ಟಾಟಾ, ಅವರನ್ನು ಪದಚ್ಯುತಿಗೊಳಿಸಿದ್ದಾರೆ ಎನ್ನಲಾಗಿದೆ. ಈ ಆರೋಪಕ್ಕೆ ತಿರುಗೇಟು ನೀಡಿದ್ದ ಸೈರಸ್ ಮಿಸ್ತ್ರಿ, ಪದಚ್ಯುತಿ ಆಘಾತ ತಂದಿದೆ, ತಮ್ಮನ್ನು ಮುಖ್ಯಸ್ಥರೆಂದು ನೇಮಕ ಮಾಡಿದ ಮೇಲೂ ರತನ್ ಟಾಟಾ ತಮ್ಮ ಕಾರ್ಯನಿರ್ವಹಣೆಯಲ್ಲಿ ಮೂಗು ತೂರಿಸುತ್ತಿದ್ದರು ಅಂತಾ ಆರೋಪ ಮಾಡಿದ್ದಾರೆ. ಏರ್ ಏಷ್ಯಾ ಇಂಡಿಯಾ ವಹಿವಾಟಿನಲ್ಲಿ ಅಕ್ರಮ ನಡೆದಿದೆ ಅಂತ ಕೂಡ ದೂರಿದ್ದರು. ಈ ವಿವಾದ ಸಂಬಂಧ ಸೈರಸ್ ಮಿಸ್ತ್ರಿ ಹಾಗೂ ರತನ್ ಟಾಟಾ ಪ್ರತ್ಯೇಕವಾಗಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...