alex Certify
ಕನ್ನಡ ದುನಿಯಾ       Mobile App
       

Kannada Duniya

ಇಶಾ ಅಂಬಾನಿ ವರ್ಷದ ಗಳಿಕೆಯೆಷ್ಟು ಗೊತ್ತಾ…?

ದೇಶದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ನಿಶ್ಚಿತಾರ್ಥ ಅದ್ಧೂರಿಯಾಗಿ ಇಟಲಿಯಲ್ಲಿ ನಡೆದಿದೆ. ಈ ವರ್ಷಾಂತ್ಯದಲ್ಲಿ ಇಶಾ, ಆನಂದ್ ಕೈ ಹಿಡಿಯಲಿದ್ದಾರೆ. ಇಶಾ ಮದುವೆ ಡಿಸೆಂಬರ್ ನಲ್ಲಿ ನಡೆಯಲಿದೆ. ಮದುವೆ ನಡೆಯುವ ಸ್ಥಳವನ್ನು ಇಶಾ ಆಯ್ಕೆ ಮಾಡಿದ್ದಾರೆ. ಉದಯ್ಪುರದಲ್ಲಿ ಮದುವೆ ಆಚರಣೆಗಳು ನಡೆಯಲಿವೆ. ಮುಂಬೈನಲ್ಲಿ ಮದುವೆ ತಯಾರಿಯನ್ನು ಅಂಬಾನಿ ಕುಟುಂಬ ಶುರು ಮಾಡಿದೆ.

ಏಷ್ಯಾದ 12 ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಇಶಾ ಹೆಸರಿದೆ. ಇಶಾ, ಕೇವಲ ಮುಕೇಶ್-ನೀತಾ ಅಂಬಾನಿ ಮಗಳೊಂದೇ ಅಲ್ಲ. ಇಶಾ ಸಮಾಜದಲ್ಲಿ ತಮ್ಮದೇ ಸ್ಥಾನ ಹೊಂದಿದ್ದಾರೆ. ಅತ್ಯುತ್ತಮ ಕೆಲಸಗಳಿಂದ ಭೇಷ್ ಎನ್ನಿಸಿಕೊಂಡಿರುವ ಇಶಾ, 2015 ರಲ್ಲಿ ಫೋರ್ಬ್ಸ್ ನ ಅತ್ಯಂತ ಚಿಕ್ಕ ವಯಸ್ಸಿನ ಶ್ರೀಮಂತ ಮಹಿಳೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ರು. 2018 ರ ಉತ್ತರಾಧಿಕಾರಿ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಯ ಅನೇಕ ಕಂಪನಿಗಳಲ್ಲಿ ಇಶಾ ಪ್ರಮುಖ ಹುದ್ದೆ ನಿಭಾಯಿಸುತ್ತಿದ್ದಾರೆ. ಇಶಾ ಅಂಬಾನಿ ಪ್ರತಿ ವರ್ಷದ ಗಳಿಕೆ ಸುಮಾರು 4710 ಕೋಟಿ ರೂಪಾಯಿ. 16 ನೇ ವಯಸ್ಸಿನಲ್ಲಿಯೇ ಇಶಾ ರಿಲಯನ್ಸ್ ಇಂಡಸ್ಟ್ರೀಯ 80 ಮಿಲಿಯನ್ ಡಾಲರ್ ಷೇರುಗಳ ಮಾಲೀಕೆಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...