alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಭಾವಿ ಅಳಿಯ ಹೊಂದಿರುವ ಆಸ್ತಿ ಮೌಲ್ಯ ಎಷ್ಟು ಗೊತ್ತಾ…?

ಭಾರತದ ಕುಬೇರ ಮುಕೇಶ್ ಮತ್ತು ನೀತಾ ಅಂಬಾನಿ ಏಕೈಕ ಪುತ್ರಿ ಇಶಾ ಅಂಬಾನಿಯ ವಿವಾಹ ನಿಶ್ಚಯ ಕಾರ್ಯ ಇಟಲಿಯ ಲೇಕ್ ಕಾಮೋದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಅಂಬಾನಿ ಪುತ್ರಿಯನ್ನೇ ವರಿಸುತ್ತಿರುವ ಆನಂದ್ ಹಿನ್ನಲೆ ಏನು…? ಆತನ ಕೆಲಸ ಏನು ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ.

ಆನಂದ್ ಪಿರಾಮಲ್ ಗೆ ಈಗ 33ವರ್ಷ. ಪಿರಾಮಲ್ ಗ್ರೂಪ್ ಆಫ್ ಕಂಪನೀಸ್ ನ ಮ್ಯಾನೇಜಿಂಗ್ ಡೈರೆಕ್ಟರ್. ಹೆಲ್ತ್ ಕೇರ್, ಆರ್ಥಿಕ ಸೇವೆಗಳು, ರಿಯಲ್ ಎಸ್ಟೇಟ್, ಪ್ಯಾಕೇಜಿಂಗ್ ಸೇರಿದಂತೆ ಹಲವು ವ್ಯವಹಾರಗಳನ್ನ ಆನಂದ್ ನ ಪಿರಾಮಲ್ ಸಂಸ್ಥೆ ನಡೆಸುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸಂಸ್ಥೆಗಳ ಒಟ್ಟಾರೆ ಮೌಲ್ಯ 40,350 ಕೋಟಿ ರೂಪಾಯಿಗಳಾಗುತ್ತೆ.

2012ರಿಂದಲೂ ವ್ಯವಹಾರಿಕ ಪ್ರಪಂಚದಲ್ಲಿ ಪಿರಾಮಲ್ ಗ್ರೂಪ್ ಆಫ್ ಕಂಪನೀಸ್ ತನ್ನ ಅಸ್ಥಿತ್ವವನ್ನು ಹೊಂದಿದೆ. ಪಿರಾಮಲ್ ರಿಯಾಲಿಟಿ ಅನ್ನೊ ಮತ್ತೊಂದು ಸಂಸ್ಥೆಯ ಮೂಲ ಹೌಸಿಂಗ್ ಪ್ರಾಜೆಕ್ಟ್ ಗಳಲ್ಲಿ ಕೂಡ ಆನಂದ್ ಸುಮಾರು 2700 ಕೋಟಿ ರೂಪಾಯಿಗಳಷ್ಟು ಆದಾಯ ಹೊಂದಿದ್ದಾರೆ. ಆತನ ಒಟ್ಟಾರೆ ಆಸ್ತಿ ಮೌಲ್ಯ ಎಷ್ಟು ಅನ್ನೋದು ಇನ್ನೂ ತಿಳಿದುಬಂದಿಲ್ಲ . ಪೆನ್ಸುಲ್ವೇನಿಯಾ ವಿವಿಯಿಂದ ಪದವಿ ಮತ್ತು ಹಾರ್ವರ್ಡ್ ಯೂನಿವರ್ಸಿಟಿಯ ಬ್ಯುಸಿನೆಸ್ ಸ್ಕೂಲ್ ನಿಂದ ಆನಂದ್ ಎಂಬಿಎ ಪದವಿ ಪಡೆದಿದ್ದಾರೆ.

ಇನ್ನು ಇಶಾ ರಿಲಯನ್ಸ್ ಜಿಯೋ ಇನ್ಫೋಕಾಮ್ ಮತ್ತು ರಿಲಯನ್ಸ್ ರೀಟೇಲ್ ವೆಂಚರ್ ನ ನಿರ್ದೇಶಕರಾಗಿ ಕೆಲಸ ಮಾಡ್ತಿದ್ದಾರೆ. 2016ರಲ್ಲಿ ಏಷ್ಯಾದ ಮೋಸ್ಟ್ ಪವರ್ ಫುಲ್ ಬ್ಯುಸಿನೆಸ್ ವುಮನ್ ಫೋರ್ಬ್ಸ್ ಪಟ್ಟಿಯಲ್ಲಿ ಇಶಾ ಅಂಬಾನಿ ಸ್ಥಾನ ಪಡೆದಿದ್ದರು. 2008ರಲ್ಲಿ ಇಶಾ ಅಂಬಾನಿ ಆಸ್ತಿ ಮೌಲ್ಯ 765 ಕೋಟಿ ರೂಪಾಯಿಗಳಷ್ಟಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...