alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಆಧಾರ್ ದುರ್ಬಳಕೆಯಾಗ್ತಿದೆಯಾ? ಹೀಗೆ ಚೆಕ್ ಮಾಡಿ

ಅನೇಕ ಸೇವೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಮೊಬೈಲ್, ಬ್ಯಾಂಕ್ ಖಾತೆ ಸೇರಿದಂತೆ ಅನೇಕ ಸೇವೆಗಳಿಗೆ ಆಧಾರ್ ನಂಬರ್ ಲಿಂಕ್ ಅನಿವಾರ್ಯವಾಗಿದೆ. ಆದ್ರೆ ಆಧಾರ್ ನಿಂದ ಖಾಸಗಿ ಮಾಹಿತಿ ಲೀಕ್ ಆಗ್ತಿದೆ ಎಂಬ ಭಯ ಎಲ್ಲರನ್ನೂ ಕಾಡ್ತಿದೆ. ಈ ಬಗ್ಗೆ ಗೊಂದಲ ಬೇಡ. ಸುಲಭವಾಗಿ ನಿಮ್ಮ ಆಧಾರ್ ಕಾರ್ಡನ್ನು ಯಾರಾದ್ರೂ ದುರ್ಬಳಕೆ ಮಾಡಿಕೊಳ್ತಿದ್ದಾರಾ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ.

ನೀವು ಮೊದಲು ವಿಶಿಷ್ಟ ಗುರುತಿನ ಪ್ರಾಧಿಕಾರದ ವೆಬ್ಸೈಟ್ https://uidai.gov.in/ ಗೆ ಲಾಗಿನ್ ಮಾಡಬೇಕು. ಅದ್ರಲ್ಲಿ ಆಧಾರ್ ದೃಢೀಕರಣ ಇತಿಹಾಸದ ಮೇಲೆ ಕ್ಲಿಕ್ ಮಾಡಿ. ನಂತ್ರ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ. ಆಧಾರ್ ನಲ್ಲಿ ನೋಂದಾಯಿತ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸೂಚಿಸಿದ ಸ್ಥಳಕ್ಕೆ ಹಾಕಬೇಕು. ಆ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಬೇಕಾಗುತ್ತದೆ.

ನಂತ್ರ ಜನರೇಟ್ ಬಟನ್ ಕ್ಲಿಕ್ ಮಾಡಿ.ಇದಾದ ನಂತ್ರ ಆರು ತಿಂಗಳ ಹಿಂದಿನ ಎಲ್ಲ ಮಾಹಿತಿ ನಿಮಗೆ ಸಿಗಲಿದೆ. ನಿಮ್ಮ ಆಧಾರ್ ಕಾರ್ಡ್ ಎಲ್ಲಿ ಬಳಕೆಯಾಗಿದೆ ಎಂಬುದರ ಮಾಹಿತಿ ನಿಮಗೆ ಸಿಗಲಿದೆ. ಒಂದು ವೇಳೆ ಆಧಾರ್ ನಂಬರ್ ದುರ್ಬಳಕೆಯಾಗಿದೆ ಎಂಬುದು ನಿಮಗೆ ಗೊತ್ತಾದಲ್ಲಿ ತಕ್ಷಣ 1947 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ.  [email protected] ಗೆ ಲಾಗಿನ್ ಆಗಿ ದೂರು ದಾಖಲಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...