alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ನಲ್ಲಿ ಸಿಮ್ ಖರೀದಿಸಿದ್ರೆ ಬೀಳುತ್ತೆ ಟೋಪಿ?

jio-jio-mn

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿರುವ, ಜಿಯೋ ಸಿಮ್ ಖರೀದಿಗೆ ಗ್ರಾಹಕರು ಮುಗಿ ಬಿದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ಬಯಲಾಗಿದೆ.

ಆನ್ ಲೈನ್ ಕಂಪನಿಯೊಂದು ರಿಲಯನ್ಸ್ ಜಿಯೋ ಸಿಮ್ ಗಳನ್ನು ಉಚಿತವಾಗಿ ಮಾರಾಟ ಮಾಡುತ್ತಿದೆ. ಹೀಗೆ ಆನ್ ಲೈನ್ ನಲ್ಲಿ ಗ್ರಾಹಕರು ಜಿಯೋ ಸಿಮ್ ಪಡೆದುಕೊಳ್ಳಲು ತಮ್ಮ ಹೆಸರು, ವಿಳಾಸ ಫೋನ್ ನಂಬರ್, ಇ ಮೇಲ್ ಐ.ಡಿ. ನೀಡಬೇಕಿದ್ದು, ಡೆಲವರಿ ಚಾರ್ಜ್ ರೂಪದಲ್ಲಿ 199 ರೂ. ಪಡೆಯಲಾಗುತ್ತಿದೆ. ಇದರೊಂದಿಗೆ ಕಂಪನಿ ಇನ್ನು ಹಲವು ವಸ್ತು ಮಾರಾಟಕ್ಕೆ ಮುಂದಾಗಿದೆ.

ಜಿಯೋ ಸಿಮ್ ಜೊತೆಗೆ 1999 ರೂ. ಬೆಲೆಯ ರಿಲಯನ್ಸ್ ಜಿಯೋ ಡಾಂಗಲ್, 2199 ರೂ. ಬೆಲೆಯ ಜಿಯೋ ವೈ ಫೈ ಡಾಂಗಲ್ ಮಾರಾಟ ಮಾಡುವುದಾಗಿಯೂ ಕಂಪನಿ ಹೇಳಿದ್ದು, ಇದಕ್ಕೆ ಮೊದಲೇ ಆನ್ ಲೈನ್ ನಲ್ಲಿ ಹಣ ಪಾವತಿಸಬೇಕಿದೆ. ಹೀಗೆ ಮಾಡಿದಲ್ಲಿ ನೀವು ಮೋಸ ಹೋದಂತೆಯೇ. ರಿಲಯನ್ಸ್ ಜಿಯೋ ಇದುವರೆಗೂ ಆನ್ ಲೈನ್ ಡಾಂಗಲ್ ಮಾರಾಟ ಮತ್ತು ಹೋಂ ಡೆಲವರಿ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಇಂತಹ ಆನ್ ಲೈನ್ ಕಂಪನಿಗಳ ಬಗ್ಗೆ ಎಚ್ಚರ ವಹಿಸುವುದು ಒಳಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...