alex Certify
ಕನ್ನಡ ದುನಿಯಾ       Mobile App
       

Kannada Duniya

ರಾಧಿಕಾ ಪ್ರೀತಿಗೆ ಬಿದ್ದಿದ್ದಾರಾ ಅಂಬಾನಿ ಪುತ್ರ ಅನಂತ್…? ಹೊಸ ಫೋಟೋ ವೈರಲ್

ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನಂತ್ ಗೆ ತುಂಬಾ ಹತ್ತಿರವಾಗಿ ನಿಂತಿರುವ ರಾಧಿಕಾರ ಈ ಫೋಟೋ ಇಬ್ಬರ ಮಧ್ಯೆ ಏನೋ ಇದೆ ಎಂಬ ಸೂಚನೆ ನೀಡ್ತಿದೆ.

ಈ ಹಿಂದೆ ಕೂಡ ಅನಂತ್ ಹಾಗೂ ರಾಧಿಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈವರೆಗೂ ಅನಂತ್, ರಾಧಿಕಾ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ. ಮೇ ತಿಂಗಳಿನಲ್ಲಿ ವೈರಲ್ ಆಗಿದ್ದ ಫೋಟೋ ನಂತ್ರ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆಂಬ ಸುದ್ದಿ ಹರಡಿತ್ತು. ಇದನ್ನು ಅಂಬಾನಿ ಕುಟುಂಬ ಅಲ್ಲಗಳೆದಿತ್ತು.

ಹೊಸ ಫೋಟೋ ವೈರಲ್ ಆಗ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಇಬ್ಬರಿಗೂ ಶುಭ ಕೋರುತ್ತಿದ್ದಾರೆ.ಇನ್ಸ್ಟ್ರಾಗ್ರಾಮ್ ನಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬರ್ತಿದೆ. ಆಕಾಶ್ ನಂತ್ರ ಅಂಬಾನಿ ಕುಟುಂಬ ಅನಂತ್ ಗೂ ಜೀವನ ಸಂಗಾತಿ ಹುಡುಕಿದೆ ಎಂಬ ಸುದ್ದಿ ಹರಡಿದೆ. ಆಕಾಶ್ ಅಂಬಾನಿ ನಿಶ್ಚಿತಾರ್ಥದಲ್ಲಿ ರಾಧಿಕಾ ಕಾಣಿಸಿಕೊಂಡಿದ್ದರು. 24 ವರ್ಷದ ರಾಧಿಕಾ ವ್ಯಾಪಾರಿ ವಿರೇನ್ ಮರ್ಚೆಂಟ್ ಮಗಳು. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಸೈನ್ಸ್ ಅಧ್ಯಯನ ಪೂರ್ಣಗೊಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...