alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಸವಾರರಿಗೆ ಶುಭ ಸುದ್ದಿ ನೀಡಿದ ಐ.ಆರ್.ಡಿ.ಎ.

ನವದೆಹಲಿ: ವಿಮೆ ಮಾರುಕಟ್ಟೆ ನಿಯಂತ್ರಕ ಐ.ಆರ್.ಡಿ.ಎ. ವತಿಯಿಂದ ಕಾರು, ದ್ವಿಚಕ್ರವಾಹನ ಹೊಂದಿರುವವರಿಗೆ ಸಿಹಿಸುದ್ದಿಯನ್ನು ನೀಡಲಾಗಿದ್ದು, ಏಪ್ರಿಲ್ 1 ರಿಂದ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ದರ ಇಳಿಕೆಯಾಗಲಿದೆ.

2018 -19 ನೇ ಸಾಲಿಗೆ ಮೋಟಾರು ವಾಹನಗಳ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ದರವನ್ನು ಕಡಿತ ಮಾಡಲಾಗಿದೆ. ನಿಮ್ಮ ವಾಹನಗಳಿಂದ ಬೇರೆಯ ವಾಹನಗಳಿಗೆ ಹಾನಿಯಾದ ಸಂದರ್ಭದಲ್ಲಿ ಕ್ಲೇಮ್ ಮಾಡುವ ವಿಮೆಗೆ ಥರ್ಡ್ ಪಾರ್ಟಿ ವಿಮೆ ಎನ್ನಲಾಗುತ್ತದೆ.

1000 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಇಂಜಿನ್ ಹೊಂದಿರುವ ಕಾರುಗಳಿಗೆ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿದೆ. ಪ್ರಸ್ತುತ 2065 ರೂ. ದರ ಇದ್ದು, ಅದನ್ನು 1850 ರೂ.ಗೆ ಇಳಿಕೆ ಮಾಡಲಾಗಿದೆ. 1000 ಸಿ.ಸಿ.ಗಿಂತ ಹೆಚ್ಚು ಸಾಮರ್ಥ್ಯದ ಕಾರುಗಳಿಗೆ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ.

75 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಇಂಜಿನ್ ಹೊಂದಿರುವ ವಾಹನಗಳಿಗೆ ಪ್ರೀಮಿಯಂ ದರವನ್ನು 569 ರೂ.ನಿಂದ 427 ರೂ.ಗೆ ಇಳಿಕೆ ಮಾಡಲಾಗಿದೆ. 75 ಸಿ.ಸಿ. ಯಿಂದ 150 ಸಿ.ಸಿ. ದ್ವಿಚಕ್ರವಾಹನಗಳ ಪ್ರೀಮಿಯಂ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ.

350 ಸಿ.ಸಿ.ಗಿಂತ ಹೆಚ್ಚಿನ ಸಾಮರ್ಥ್ಯದ ದ್ವಿಚಕ್ರವಾಹನಗಳಿಗೆ ಥರ್ಡ್ ಪಾರ್ಟಿ ಪ್ರೀಮಿಯಂ ದರ ದ್ವಿಗುಣಗೊಳಿಸಲಾಗಿದ್ದು, 1019 ರೂ.ನಿಂದ 2323 ರೂ.ಗೆ ಏರಿಕೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...