alex Certify
ಕನ್ನಡ ದುನಿಯಾ       Mobile App
       

Kannada Duniya

ಡೆಬಿಟ್ ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡಿದ್ರೆ ಜೇಬಿಗೆ ಕತ್ತರಿ

ರೈಲು ಟಿಕೆಟನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್ ಬಳಸಿ ಬುಕ್ ಮಾಡುವವರು ನೀವಾಗಿದ್ದರೆ ಇದನ್ನು ಅವಶ್ಯಕವಾಗಿ ಓದಿ. ಐಆರ್ಸಿಟಿಸಿ ಪೋರ್ಟಲ್ ನಲ್ಲಿ ಡೆಬಿಟ್ ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡಿದ್ರೆ ಹೆಚ್ಚುವರಿ ಶುಲ್ಕ ನೀಡಬೇಕು. ಐಆರ್ಸಿಟಿಸಿ ಈ ಬಗ್ಗೆ ಮಾಹಿತಿ ನೀಡಿದೆ.

ಐಸಿಐಸಿಐ, ಆಕ್ಸಿಸ್ ಹಾಗೂ ಹೆಚ್.ಡಿ.ಎಫ್.ಸಿ ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡಿದ್ರೆ ಶುಲ್ಕ ಪಾವತಿಸಬೇಕಾಗುತ್ತದೆ. ಪೇಟಿಎಂ, ಪೇಯು ಹಾಗೂ ಐಟಿಝೆಡ್ ಮೂಲಕ ಪೇಮೆಂಟ್ ಮಾಡಿದ್ರೂ ಶುಲ್ಕ ಪಾವತಿಸಬೇಕಾಗುತ್ತದೆ.

ಐಆರ್ಸಿಟಿಸಿ ಪ್ರಕಾರ, ಒಂದು ಸಾವಿರ ರೂಪಾಯಿಯವರೆಗೆ ವ್ಯವಹಾರ ನಡೆಸಿದ್ರೆ ಶೇಕಡ 0.25 ರಷ್ಟು ಶುಲ್ಕ ಪಾವತಿ ಮಾಡಬೇಕು. ಅಂದ್ರೆ 2.5 ರೂಪಾಯಿ ನೀಡಬೇಕು. 1 ಸಾವಿರದಿಂದ 2 ಸಾವಿರದವರೆಗೆ ವ್ಯವಹಾರ ನಡೆಸಿದ್ರೆ ಶೇಕಡಾ 0.5 ವರೆಗೆ ಶುಲ್ಕ ಪಾವತಿ ಮಾಡಬೇಕು. 2 ಸಾವಿರಕ್ಕಿಂತ ಹೆಚ್ಚು ವ್ಯವಹಾರ ನಡೆಸಿದ್ರೆ ಶೇಕಡಾ 1 ರಷ್ಟು ಶುಲ್ಕ ನೀಡಬೇಕು. 5 ಸಾವಿರದವರೆಗೆ ವ್ಯವಹಾರ ನಡೆಸಿದ್ರೆ 50 ರೂಪಾಯಿ ತುಂಬ ಬೇಕಾಗುತ್ತದೆ. 10 ಸಾವಿರ ವ್ಯವಹಾರಕ್ಕೆ ಐಆರ್ಸಿಟಿಸಿ 100 ರೂಪಾಯಿ ಪಡೆಯುತ್ತದೆ. ಈ ಹಿಂದೆ ಡೆಬಿಟ್ ಕಾರ್ಡ್ ಗೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ. ಕ್ರೆಡಿಟ್ ಕಾರ್ಡ್ ಬಳಕೆದಾರರು ಮಾತ್ರ 1.8 ರಷ್ಟು ಚಾರ್ಜ್ ನೀಡಬೇಕಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...