alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿ ಈ ಸೌಲಭ್ಯ ಪಡೆಯಿರಿ

ರೈಲಿನಲ್ಲಿ ಹೆಚ್ಚು ಪ್ರಯಾಣ ಬೆಳೆಸುವ ಹಾಗೂ ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಖುಷಿ ಸುದ್ದಿ. ಐಆರ್ಸಿಟಿಸಿ ರೇಲ್ ಕನೆಕ್ಟ್ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವೊಂದನ್ನು ನೀಡಲಿದೆ.

ಐಆರ್ ಸಿಟಿಸಿ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಿದ್ರೆ ಪೇಮೆಂಟ್ ನ ದೀರ್ಘ ಪಾವತಿ ಪ್ರಕ್ರಿಯೆಯಿಂದ ಮುಕ್ತಿ ಸಿಗಲಿದೆ. ಐಆರ್ ಸಿಟಿಸಿ ಸದ್ಯದಲ್ಲೇ ಸ್ವಂತ ಪೇಮೆಂಟ್ ಎಗ್ರಿಗೇಟರ್ ಶುರುಮಾಡುವ ತಯಾರಿಯಲ್ಲಿದೆ. ಈ ಎಗ್ರಿಗೇಟರ್ ಗೆ IRCTC-ipay ಎಂದು ಹೆಸರಿಡಲಾಗುವುದು. ಈ ವರ್ಷದ ಅಗಸ್ಟ್ ವೇಳೆಗೆ ಐಆರ್ಸಿಟಿಸಿ ಅಧಿಕೃತ ವೆಬ್ ಸೈಟ್ ನಲ್ಲಿ IRCTC-ipay ಸಿಗಲಿದೆ.

IRCTC-ipayನಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಅಂತರಾಷ್ಟ್ರೀಯ ಕಾರ್ಡ್, ಆಟೋ ಡೆಬಿಟ್, ಯುಪಿಐ, ವಾಲೆಟ್ಸ್ ಸೇರಿದಂತೆ ಬೇರೆ ಬೇರೆ ಪೇಮೆಂಟ್ ಕಾರ್ಡ್ ಗಳ ಆಯ್ಕೆಯಿರಲಿದೆ. ಐಆರ್ಸಿಟಿಸಿ IRCTC-ipay ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಆಗಸ್ಟ್ ನಲ್ಲಿ ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...