alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆ ಇ-ಟಿಕೆಟ್ ಬುಕ್ ಮಾಡೋರಿಗೆ ಖುಷಿ ಸುದ್ದಿ

ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ. ಐಆರ್ಸಿಟಿಸಿ ಸೇವಾ ಶುಲ್ಕ ರಿಯಾಯಿತಿಯನ್ನು ಇನ್ನೂ 7 ತಿಂಗಳು ವಿಸ್ತರಿಸಿದೆ. ಇ-ಟಿಕೆಟ್ ಅಥವಾ ಐ-ಟಿಕೆಟ್ ಬುಕ್ ಮಾಡಿದ್ರೆ ನಿಮಗೆ ಸರ್ವಿಸ್ ಚಾರ್ಜ್ ಮೇಲೆ ವಿನಾಯಿತಿ ಸಿಗಲಿದೆ. ಮಾರ್ಚ್ 31,2019 ರವರೆಗೆ ಸರ್ವಿಸ್ ಚಾರ್ಜ್ ನಲ್ಲಿ ರಿಯಾಯಿತಿ ಸಿಗಲಿದೆ.

2016 ರಲ್ಲಿ ನೋಟು ನಿಷೇಧದ ನಂತ್ರ ಡಿಜಿಟಲ್ ಇಂಡಿಯಾ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು ಸರ್ವಿಸ್ ಶುಲ್ಕ ರದ್ದು ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು. ಐಆರ್ಸಿಟಿಸಿ ಆಗಸ್ಟ್ 31,2018 ರವರೆಗೆ ಸರ್ವಿಸ್ ಚಾರ್ಜ್ ಪಡೆಯದಿರಲು ನಿರ್ಧರಿಸಿತ್ತು. ಆದ್ರೀಗ ಅವಧಿ ವಿಸ್ತರಣೆ ಮಾಡಿದೆ. ರೈಲ್ವೆ ಇಲಾಖೆ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ ಸೇವಾ ಶುಲ್ಕ ನೀಡುವಂತಿಲ್ಲ. ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ ಈ ಶುಲ್ಕ ನೀಡಬೇಕಾಗಿತ್ತು.

ಐಆರ್ಸಿಟಿಟಿ, ಐ ಟಿಕೆಟ್ ಬುಕ್ಕಿಂಗ್ ಗೆ ಬೇರೆ ಹಾಗೂ ಇ- ಟಿಕೆಟ್ ಬುಕ್ಕಿಂಗ್ ಗೆ ಬೇರೆ ಶುಲ್ಕ ವಿಧಿಸುತ್ತದೆ. ಸ್ಲೀಪರ್ ಕ್ಲಾಸ್ ಇ-ಟಿಕೆಟ್ ಗೆ 20 ರೂಪಾಯಿ ಹಾಗೂ ಎಸಿ ಕ್ಲಾಸ್ ಗೆ 40 ರೂಪಾಯಿ ಸೇವಾ ಶುಲ್ಕ ವಿಧಿಸುತ್ತದೆ. ಸ್ಲೀಪರ್ ಕ್ಲಾಸ್ ಐ ಟಿಕೆಟ್ ಬುಕ್ಕಿಂಗ್ ಗೆ 80 ರೂಪಾಯಿ ಹಾಗೂ ಎಸಿ ಕ್ಲಾಸ್ ಗೆ 120 ರೂಪಾಯಿ ಚಾರ್ಜ್ ಮಾಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...