alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗ್ರಾಹಕರಿಗೆ ಬಂಪರ್ ಆಫರ್

jio_jxlp6dg

ನೀವು ಜಿಯೋ ಗ್ರಾಹಕರಾಗಿದ್ದು ಐಪಿಎಲ್ ಅಭಿಮಾನಿಯಾಗಿದ್ದರೆ ನಿಮಗೊಂದು ಖುಷಿ ಸುದ್ದಿ. ಈ ಆವೃತ್ತಿಯ ಐಪಿಎಲ್ ನ ಎಲ್ಲ ಪಂದ್ಯಗಳನ್ನು ರಿಲಯನ್ಸ್ ಜಿಯೋ  ಗ್ರಾಹಕರು ಉಚಿತವಾಗಿ ನೋಡುವ ಅವಕಾಶ ಸಿಗ್ತಾ ಇದೆ.

ಈಗ ಜಿಯೋ ಸೇವೆ ಪಡೆಯಲು ನೀವು ಹಣ ತುಂಬಬೇಕು ಎಂಬುದು ನೆನಪಿಡಿ. ಮೊದಲು 99 ರೂಪಾಯಿ ನೀಡಿ ರಿಲಯನ್ಸ್ ಜಿಯೋ ಪ್ರೈಂ ಸದಸ್ಯರಾಗಿ. ನಂತ್ರ 303 ರೂಪಾಯಿ ರಿಚಾರ್ಜ್ ಮಾಡಿದರೆ ನೀವು ಮೂರು ತಿಂಗಳು ರಿಲಯನ್ಸ್ ಜಿಯೋದ ಉಚಿತ ಸೇವೆಯನ್ನು ಪಡೆಯುವಿರಿ.

ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಜಿಯೋ ಟಿವಿ ಆ್ಯಪ್ ಇರಬೇಕು. ಒಂದು ವರ್ಷದವರೆಗೆ ಜಿಯೋದ ಕಂಟೆಂಟ್ ಸರ್ವೀಸ್ ಉಚಿತ. ಹಾಗಾಗಿ ನೀವು ಯಾವುದೇ ಹಣ ಪಾವತಿ ಮಾಡದೆ ಐಪಿಎಲ್ ಪಂದ್ಯಗಳ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.

ಜಿಯೋ ಟಿವಿಯಲ್ಲಿ ಚಾನೆಲ್ ಗಳ ಪಟ್ಟಿ ಇದೆ. ಅದ್ರಲ್ಲಿ ಸೋನಿ ಮ್ಯಾಕ್ಸ್, ಸೋನಿ ಸಿಕ್ಸ್ ಹಾಗೂ ಸೋನಿ ಇಎಸ್ಪಿಎನ್ ಇದೆ. ಇದ್ರಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರವಾಗಲಿದ್ದು, ಜಿಯೋ ಗ್ರಾಹಕರು ಮೊಬೈಲ್ ಮೂಲಕವೇ ಪಂದ್ಯ ವೀಕ್ಷಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...