alex Certify
ಕನ್ನಡ ದುನಿಯಾ       Mobile App
       

Kannada Duniya

‘ಐಫೋನ್ 7’ ಖರೀದಿಗೆ ಬಂದವರಿಗೆ ಕಾದಿತ್ತು ನಿರಾಸೆ

App

ಸ್ಯಾನ್ ಫ್ರಾನ್ಸಿಸ್ಕೋ: ಆಪಲ್ ಕಂಪನಿ ಹೊಸದಾಗಿ ಪರಿಚಯಿಸಿರುವ ಆಪಲ್ ‘ಐಫೋನ್ 7’ ಹಾಗೂ ‘ಐಫೋನ್ 7 ಪ್ಲಸ್’ ಅಕ್ಟೋಬರ್ 7 ರಿಂದ ಭಾರತದ ಮಾರುಕಟ್ಟೆಯಲ್ಲಿ ದೊರೆಯಲಿವೆ.

ಭಾರತ ಹೊರತುಪಡಿಸಿ ಶುಕ್ರವಾರ ಮಧ್ಯರಾತ್ರಿಯಿಂದಲೇ, ವಿಶ್ವದ ಅನೇಕ ದೇಶಗಳಲ್ಲಿ ‘ಐಫೋನ್ 7’ ಹಾಗೂ ‘ಐಫೋನ್ 7 ಪ್ಲಸ್’ ಹ್ಯಾಂಡ್ ಸೆಟ್ ಮಾರಾಟ ಆರಂಭವಾಗಿದೆ. ಮೊದಲ ದಿನವೇ ಹ್ಯಾಂಡ್ ಸೆಟ್ ಖರೀದಿಸಬೇಕೆಂಬ ಆಸೆಯಿಂದ ಐಫೋನ್ ಮಳಿಗೆಗಳಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಕ್ಯಾಲಿಫೋರ್ನಿಯಾ, ಸಿಡ್ನಿ, ಅಮೆರಿಕ, ಸಿಂಗಾಪೂರ ಸೇರಿದಂತೆ ಅನೇಕ ದೇಶಗಳಲ್ಲಿ ಐಫೋನ್ ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

ಗ್ರಾಹಕರು ಮೊದಲ ದಿನವೇ ‘ಐಫೋನ್ 7’ ಹಾಗೂ ‘ಐಫೋನ್ 7 ಪ್ಲಸ್’ ಖರೀದಿಗೆ ಮುಗಿ ಬಿದ್ದ ಕಾರಣ, ಕೆಲವೇ ಗಂಟೆಯಲ್ಲಿ ಹ್ಯಾಂಡ್ ಸೆಟ್ ಖಾಲಿಯಾಗಿ, ಹಲವು ಗ್ರಾಹಕರು ನಿರಾಸೆಯಿಂದ ತೆರಳಿದ್ದಾರೆ. ಮೊದಲ ಹಂತದ ಬೇಡಿಕೆ ಬಗ್ಗೆ ಅಂದಾಜು ಇರಲಿಲ್ಲ. ಇನ್ನೂ ಹೆಚ್ಚಿನ ಸಂಖ್ಯೆಯ ಹ್ಯಾಂಡ್ ಸೆಟ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಆಪಲ್ ಕಂಪನಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...