alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್, ಡೀಸೆಲ್ ಕುರಿತು ಸಿಹಿಸುದ್ದಿ ನೀಡಿದ ಸರ್ಕಾರ

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಜಾಸ್ತಿಯಾಗಿರುವ ಹಿನ್ನಲೆಯಲ್ಲಿ ಶುದ್ಧ ಇಂಧನ ಬಳಕೆಗೆ ಸರ್ಕಾರ ಕ್ರಮಕೈಗೊಂಡಿದೆ.

ಆಲ್ಟ್ರಾ ಕ್ಲೀನ್ ಯುರೋ -6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ಇಂದಿನಿಂದ ಚಾಲನೆ ನೀಡಲಾಗಿದೆ.

2019 ರ ಜನವರಿ 1 ರಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ, ಮುಂಬೈ ಮೊದಲಾದ 13 ಮಹಾನಗರಗಳಲ್ಲಿ ಶುದ್ಧ ಇಂಧನ ಪೂರೈಕೆಗೆ ಸರ್ಕಾರ ಕ್ರಮ ಕೈಗೊಂಡಿದೆ. ವಾಯುಮಾಲಿನ್ಯ ತಡೆಗೆ ಸಹಕಾರಿಯಾಗಲಿರುವ ಈ ಶುದ್ಧ ಇಂಧನಕ್ಕೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಭರಿಸಬೇಕಿಲ್ಲ.

ದೆಹಲಿ ಇಂದಿನಿಂದ ಯುರೋ -4 ರಿಂದ ಯುರೋ -6 ದರ್ಜೆಯ ಶುದ್ಧ ಇಂಧನ ಬಳಸುವ ಮೊದಲ ನಗರವಾಗಲಿದೆ. ಯುರೋ -6 ಇಂಧನ ಬಳಕೆಯಿಂದಾಗಿ ವಾಯು ಮಾಲಿನ್ಯ ಸುಮಾರು ಶೇ. 20 ರಷ್ಟು ಕಡಿಮೆಯಾಗಲಿದೆ.

ಶುದ್ಧ ಇಂಧನ ತಯಾರಿಕೆಗೆ ಲೀಟರ್ 50 ಪೈಸೆ ಹೆಚ್ಚು ಖರ್ಚಾಗುತ್ತದೆ. ತೈಲಕಂಪನಿಗಳು ಶುದ್ಧ ಇಂಧನ ಪೂರೈಕೆಗೆ ಹೆಚ್ಚು ಹಣ ಹೂಡಿಕೆ ಮಾಡಿವೆ. ಪ್ರಾಥಮಿಕ ಹಂತದಲ್ಲಿ ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮಗಳಲ್ಲಿ ಶುದ್ಧ ಇಂಧನ ಲಭ್ಯವಿದೆ. 2020 ರ ವೇಳೆಗೆ ದೇಶದ ಉಳಿದ ಭಾಗಗಳಲ್ಲಿಯೂ ಶುದ್ಧ ಇಂಧನ ಪೂರೈಕೆಗೆ ಕ್ರಮಕೈಗೊಳ್ಳಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...