alex Certify
ಕನ್ನಡ ದುನಿಯಾ       Mobile App
       

Kannada Duniya

FD ಯ 5 ನಿಯಮಗಳು ನಿಮಗೆ ಗೊತ್ತಾ…?

ಕಳೆದ ಕೆಲ ವರ್ಷಗಳಿಂದ ಬ್ಯಾಂಕ್ ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಕಡಿಮೆಯಾಗುತ್ತಲೇ ಇದೆ. ಆದ್ರೂ ಇದು ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಗಳಲ್ಲೊಂದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸದ್ಯ ಒಂದು ವರ್ಷದ ಫಿಕ್ಸೆಡ್ ಡೆಪಾಸಿಟ್ ಗಳಿಗೆ ಶೇ.6.75ರಷ್ಟು ಬಡ್ಡಿ ನೀಡುತ್ತಿದೆ. ಈ ಫಿಕ್ಸೆಡ್ ಡೆಪಾಸಿಟ್ ಗಳ ಬಗ್ಗೆ 5 ಪ್ರಮುಖ ನಿಯಮಗಳನ್ನು ನೀವು ತಿಳಿದುಕೊಂಡಿರಬೇಕು.

ಡೆಪಾಸಿಟ್ ಇನ್ಷೂರೆನ್ಸ್ : ಬ್ಯಾಂಕ್ ನಲ್ಲಿ ನೀವು ಠೇವಣಿ ಇಟ್ಟ ಹಣಕ್ಕೆ ಇದು ಭದ್ರತೆ ಇದ್ದಂತೆ. ಡೆಪಾಸಿಟ್ ಇನ್ಷೂರೆನ್ಸ್ & ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ ಇದನ್ನು ಒದಗಿಸುತ್ತದೆ. ಬ್ಯಾಂಕ್ ಗಳು ಪ್ರೀಮಿಯಂ ಮೊತ್ತವನ್ನು ಭರಿಸಬೇಕು. ಇಲ್ಲವಾದಲ್ಲಿ DICGC ಗ್ರಾಹಕರಿಗೆ 1 ಲಕ್ಷ ರೂ.ವರೆಗೂ ಬಡ್ಡಿ ಸಮೇತ ಹಣ ನೀಡುತ್ತದೆ. ಪ್ರತಿಗ್ರಾಹಕರಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಗರಿಷ್ಠ 1 ಲಕ್ಷ ರೂ.ವರೆಗೆ ಡೆಪಾಸಿಟ್ ಇನ್ಷೂರೆನ್ಸ್ ಸೌಲಭ್ಯವಿರುತ್ತದೆ.

ಎಫ್ ಡಿ ಮೇಲೆ ಸಾಲ ಮತ್ತು ಓವರ್ ಡ್ರಾಫ್ಟ್ ಸೌಲಭ್ಯ : ಪ್ರಧಾನ ಠೇವಣಿ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.90 ರಷ್ಟು ಸಾಲ ಮತ್ತು ಓವರ್ ಡ್ರಾಫ್ಟ್ ಸೌಲಭ್ಯ ನೀಡುತ್ತಿದೆ. ಫಿಕ್ಸೆಡ್ ಡೆಪಾಸಿಟ್ ಮೇಲೆ ನೀವು ಗಳಿಸುವ ಬಡ್ಡಿಗಿಂತ ಶೇ.1ರಷ್ಟು ಹೆಚ್ಚುವರಿ ಬಡ್ಡಿಯನ್ನು ಇದಕ್ಕೆ ವಿಧಿಸಲಾಗುತ್ತದೆ.

ಟಿಡಿಎಸ್ : ಫಿಕ್ಸೆಡ್ ಡೆಪಾಸಿಟ್ ಗಳಿಗೆ ನೀಡುವ ಬಡ್ಡಿದರಕ್ಕೆ ತೆರಿಗೆ ಅನ್ವಯವಾಗುತ್ತದೆ. ಎಷ್ಟು ಬಡ್ಡಿ ನೀಡಲಾಗಿದೆ ಅನ್ನೋದರ ಮೇಲೆ ತೆರಿಗೆ ಕೂಡ ಪಾವತಿಯಾಗುತ್ತದೆ. ಬಡ್ಡಿದರದ ಮೇಲೆ ಶೇ.10ರಷ್ಟು ಟಿಡಿಎಸ್ ಅನ್ನು ಬ್ಯಾಂಕ್ ಕಡಿತಗೊಳಿಸುತ್ತದೆ. ಆದಾಯ ವರ್ಷಕ್ಕೆ ಕನಿಷ್ಠ 10,000 ರೂಪಾಯಿ ಇದ್ದಲ್ಲಿ ಮಾತ್ರ. ನೀವು ಆದಾಯ ತೆರಿಗೆ ಪಾವತಿಸಿ ಟಿಡಿಎಸ್ ರಿಫಂಡ್ ಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಗಳಲ್ಲಿ ಟಿಡಿಎಸ್ ಕಡಿತ ತಡೆಯಬೇಕೆಂದಾದಲ್ಲಿ ನಿಮ್ಮ ಆದಾಯ 10,000ಕ್ಕಿಂತ ಕಡಿಮೆ ಇದೆ ಎಂಬ ಬಗ್ಗೆ 15G/15H ಫಾರ್ಮ್ ಸಲ್ಲಿಸಬೇಕು.

ರಿಕರಿಂಗ್ ಡೆಪಾಸಿಟ್ಸ್ : ರಿಕರಿಂಗ್ ಡೆಪಾಸಿಟ್ ಗಳ ಮೇಲೆ ನೀವು ಪಡೆಯುವ ಬಡ್ಡಿಗೆ ಟಿಡಿಎಸ್ ನಿಬಂಧನೆ ಅನ್ವಯವಾಗುತ್ತದೆ. 2015ರಿಂದ್ಲೇ ಈ ನಿಯಮ ಜಾರಿಯಲ್ಲಿದೆ.

ಬಡ್ಡಿ ಆದಾಯ ಜೋಡಣೆ : ಫಿಕ್ಸೆಡ್ ಡೆಪಾಸಿಟ್ ಅಥವಾ ರಿಕರಿಂಗ್ ಡೆಪಾಸಿಟ್ ಗಳ ಮೇಲೆ ನೀವು ಪಡೆಯುವ ಬಡ್ಡಿಯನ್ನು ಎಲ್ಲಾ ಬ್ಯಾಂಕ್ ಶಾಖೆಗಳ ಜೊತೆ ಸೇರ್ಪಡೆ ಮಾಡಲಾಗುತ್ತದೆ. ಈ ಮೂಲಕ ಟಿಡಿಎಸ್ ಲೆಕ್ಕ ಹಾಕಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...