alex Certify
ಕನ್ನಡ ದುನಿಯಾ       Mobile App
       

Kannada Duniya

25 ವರ್ಷಗಳ ನಂತ್ರ ಭಾರತಕ್ಕೆ ಕಾಲಿಡ್ತಿದೆ ಈ ತಂತ್ರಜ್ಞಾನ

ಭಾರತ ಇಂಟರ್ನೆಟ್ ಟೆಲಿಫೋನಿ ಜಗತ್ತಿಗೆ ಕಾಲಿಡುತ್ತಿದೆ. ಸಿಮ್ ಮತ್ತು ಸಿಗ್ನಲ್ ಇಲ್ಲದೆ ಕರೆ ಹಾಗೂ ಮೆಸ್ಸೇಜ್ ಮಾಡುವ ಸೌಲಭ್ಯವನ್ನು ಭಾರತೀಯರು ಪಡೆಯಲಿದ್ದಾರೆ. ಹಿಂದಿನ ವರ್ಷ ಟೆಲಿಕಾಂ ಸಚಿವಾಲಯಕ್ಕೆ ಟ್ರಾಯ್ ಕಳುಹಿಸಿದ್ದ ಪ್ರಸ್ತಾವನೆಗೆ ಮೇ ತಿಂಗಳಿನಲ್ಲಿ ಒಪ್ಪಿಗೆ ಸಿಕ್ಕಿತ್ತು. ಆದ್ರೆ ಕೆಲ ಟೆಲಿಕಾಂ ಕಂಪನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಆದ್ರೆ ನಿಯಮ ಕಟ್ಟುನಿಟ್ಟಾದ ಮೇಲೆ ಎಲ್ಲ ಟೆಲಿಕಾಂ ಕಂಪನಿಗಳು ಇಂಟರ್ನೆಟ್ ಟೆಲಿಫೋನಿ ಜಾರಿಗೆ ತರುವ ನಿಟ್ಟಿನಲ್ಲಿ ಕೆಲಸ ಶುರು ಮಾಡಿವೆ.

ವಿಶ್ವದ ತಂತ್ರಜ್ಞಾನ ಜಗತ್ತಿಗೆ ಹೋಲಿಕೆ ಮಾಡಿದ್ರೆ ಭಾರತ 25 ವರ್ಷಗಳ ನಂತ್ರ ಇಂಟರ್ನೆಟ್ ಟೆಲಿಫೋನಿ ಅಳವಡಿಸಿಕೊಳ್ತಿದೆ. ಭಾರತದಲ್ಲಿ 1995 ರಲ್ಲಿಯೇ ಇಂಟರ್ನೆಟ್ ವ್ಯವಸ್ಥೆ ಶುರುವಾಗಿದೆ. ಆ ವೇಳೆ ಜಗತ್ತಿನಲ್ಲಿ ಇಂಟರ್ನೆಟ್ ಟೆಲಿಫೋನಿ ಜಾರಿಗೆ ಬಂದಿತ್ತು. ಟೆಲಿಕಾಂ ಕಂಪನಿಗಳಿಗೆ ಲಾಭ ಒದಗಿಸಲು ಗ್ರಾಹಕರ ಹಿತಾಸಕ್ತಿಯನ್ನು ಕಡೆಗಣಿಸಲಾಗಿತ್ತು. ಅಗ್ಗದ ಸೌಲಭ್ಯಗಳು ಗ್ರಾಹಕರಿಗೆ ಸಿಕ್ಕಿರಲಿಲ್ಲ.

ಇಂಟರ್ನೆಟ್ ಮೂಲಕ ಕರೆ ಮಾಡುವ ತಂತ್ರಜ್ಞಾನಕ್ಕೆ ಇಂಟರ್ನೆಟ್ ಟೆಲಿಫೋನಿ ಎನ್ನುತ್ತಾರೆ. ಇದಕ್ಕೆ ಸಾರ್ವಜನಿಕ ವೈಫೈ ಅವಶ್ಯಕತೆಯಿರುತ್ತದೆ. ಇಂಟರ್ನೆಟ್ ಪ್ರೋಟೋಕಾಲ್ ಮೂಲಕ ಕರೆ ಮಾಡಬಹುದಾಗಿದೆ. ಇದನ್ನು VoIP ತಂತ್ರಜ್ಞಾನವೆಂದು ಕರೆಯಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...