alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾ ಕಂಪನಿಗಳು ನೀಡಬೇಕಿದೆ ಬರೋಬ್ಬರಿ 500 ಕೋಟಿ ರೂ. ಪರಿಹಾರ…!

ಕೇರಳದಲ್ಲಿ ನಡೆದ ಜಲ ಪ್ರಳಯದ ಬಿಸಿ ನಿಧಾನವಾಗಿ ವಿವಿಧ ಕ್ಷೇತ್ರಗಳ ಮೇಲೆ ವ್ಯಾಪಿಸುತ್ತಿದ್ದು, ಇದೀಗ ವಿಮೆ ಕಂಪೆನಿಗಳು ಚಿಂತೆಗೀಡಾಗಿವೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟ ಪರಿಹಾರಕ್ಕಾಗಿ ಪ್ರಾಥಮಿಕ ಮಾಹಿತಿ ಪ್ರಕಾರ ವಿಮಾ ಕಂಪೆನಿಗಳು ಬರೋಬ್ಬರಿ 500 ಕೋಟಿ ಪರಿಹಾರ ವಿತರಿಸಬೇಕಾಗಬಹುದೆಂಬ ಅಂದಾಜಿದೆ.

ಕೇರಳದಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಯಾಗಿದ್ದು, ಇದರಿಂದ ಪ್ರವಾಸೋದ್ಯಮಕ್ಕೂ ಹಿನ್ನೆಡೆಯಾಗುವ ಸಾಧ್ಯತೆ ಹೆಚ್ಚಿದೆ. ಇದೇ ವೇಳೆ ವಿಮೆ ಪಾಲಿಸಿದಾರರು ತಮ್ಮ ನಷ್ಟ ತುಂಬಿಕೊಡಲು ನಿಧಾನವಾಗಿ ವಿಮೆ ಕಂಪೆನಿಗಳ ಬಾಗಿಲು ತಟ್ಟಲಾರಂಭಿಸಿದ್ದಾರೆ. ಆರಂಭಿಕ ಮಾಹಿತಿ ಗಮನಿಸಿದರೆ 500 ಕೋಟಿ ನಷ್ಟ ಪರಿಹಾರವನ್ನು ವಿಮಾ ಕಂಪೆನಿಗಳು ನೀಡಬೇಕಾಗಬಹುದೆಂದು ಕಂಪೆನಿಯೊಂದರ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿಯು 65 ಕ್ಲೈಮ್ ಗಳನ್ನು ನೀಡಲು ಈಗಲೇ ಒಪ್ಪಿದ್ದು, 35 ಕೋಟಿ ರೂಪಾಯಿ ಮೊತ್ತವಾಗಬಹುದು. ಎರಡನೇ ಹಂತದಲ್ಲಿ 11 ಕ್ಲೈಮ್ ಸಿದ್ಧವಾಗಿದೆ. ಇನ್ನು ಕೇರಳದಲ್ಲಿ ರಬ್ಬರ್ ಕೃಷಿ, ಕಾಫಿ, ಟೀ ಎಸ್ಟೇಟ್ ಗಳು ಯಥೇಚ್ಛವಾಗಿದ್ದು ಅವುಗಳಿಗೆ ಸಂಬಂಧಿಸಿದಂತೆ ಕ್ಲೈಮ್ ಗಳ ಅರ್ಜಿ ಇನ್ನಷ್ಟೇ ಬರಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...