alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮೆ ಪಾಲಿಸಿದಾರರಿಗೊಂದು ಸುದ್ದಿ

insurance policies text isolated on white background

ನವದೆಹಲಿ: ಅಕ್ಟೋಬರ್ 1 ರಿಂದ ದೇಶದ ವಿಮಾ ವಲಯ ಡಿಜಿಟಲ್ ಸ್ವರೂಪ ಪಡೆದುಕೊಳ್ಳಲಿದೆ. ಈಗಾಗಲೇ ಆನ್ ಲೈನ್ ವಿಮೆ ಖಾತೆ ವ್ಯವಸ್ಥೆ ಕೆಲವೆಡೆ ಇದ್ದರೂ, ಅದು ಜನಪ್ರಿಯವಾಗಿಲ್ಲ. ಇದೀಗ ಹೊಸ ಪ್ರಯತ್ನ ಆರಂಭಿಸಲಾಗಿದೆ.

ವಿಮೆ ಅಭಿವೃದ್ಧಿ ಮತ್ತು ನಿಯಂತ್ರಕ ಪ್ರಾಧಿಕಾರ ವಿಮಾ ಪಾಲಿಸಿಗಳನ್ನು ಆನ್ ಲೈನ್ ಮೂಲಕ ಗ್ರಾಹಕರಿಗೆ ವಿತರಿಸುವಂತೆ ಮಾರ್ಗದರ್ಶಿ ಸೂತ್ರ ಪ್ರಕಟಿಸಿದೆ. ಅಕ್ಟೋಬರ್ 1 ರಿಂದ ಡಿಮ್ಯಾಟ್ ಸ್ವರೂಪದಲ್ಲಿ ವಿಮೆ ಪಾಲಿಸಿ ಖರೀದಿ ಅಥವಾ ನವೀಕರಣ ಮಾಡಬಹುದಾಗಿದೆ. ಆನ್ ಲೈನ್ ನಲ್ಲಿ ಷೇರುಗಳನ್ನು ಖರೀದಿಸುವಂತೆ, ವಾಹನ ವಿಮೆ ಮೊದಲಾದ ವಿಮಾ ಪಾಲಿಸಿಗಳನ್ನು ಖರೀದಿ ಅಥವಾ ನವೀಕರಣ ಮಾಡಬಹುದಾಗಿದ್ದು, ಇದಕ್ಕಾಗಿ ಇ-ಇನ್ಶೂರೆನ್ಸ್ ಖಾತೆ ಹೊಂದಬೇಕಿದೆ.

ಡಿಮ್ಯಾಟ್ ಖಾತೆಯಲ್ಲಿ ವಿಮಾ ಪಾಲಿಸಿಯನ್ನೂ ಇಟ್ಟುಕೊಳ್ಳಬಹುದು. ಅಲ್ಲದೇ, ದಾಖಲೆ ಪತ್ರಗಳು ಕಳೆದುಹೋಗುತ್ತವೆ ಎಂಬ ಆತಂಕ ಪಡುವಂತಿಲ್ಲ. ಪಾಲಿಸಿದಾರರು ಡಿಮ್ಯಾಟ್ ಖಾತೆಯಲ್ಲಿ ವಿಮೆ ಪಾಲಿಸಿ ಖರೀದಿ, ನವೀಕರಣ ಮಾಡುವುದರಿಂದ ಪೇಪರ್ ಲೆಸ್ ಪ್ರಕ್ರಿಯೆ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...