alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ್ಳೆ ಕೆಲಸ ಮಾಡ್ತಿದ್ದಾನೆ ಭಾರತದ ಈ ಹ್ಯಾಕರ್

hack

ಡೇಟಾ ಕದಿಯೋದೇ ಹ್ಯಾಕರ್ ಗಳ ಕಾಯಕ. ಮಿಲಿಯನ್ ಗಟ್ಟಲೆ ಜನರ ಡೇಟಾ ಕದ್ದು, ಸಿಸ್ಟಮ್ ಗೆ ಆ್ಯಕ್ಸೆಸ್ ಸಿಗ್ತಿದ್ದಂತೆ ಅದನ್ನೆಲ್ಲ ದುರ್ಬಳಕೆ ಮಾಡಿಕೊಳ್ಳಲು ಹ್ಯಾಕರ್ ಗಳು ಹವಣಿಸ್ತಾರೆ. ಈ ಹುಡುಗ ಕೂಡ ಅದನ್ನೇ ಮಾಡಿದ್ರೆ ಫ್ರೀಯಾಗಿ ಜಗತ್ತು ಸುತ್ತಬಹುದಿತ್ತು. ಆದ್ರೆ ಆತ ಹಾಗೆ ಮಾಡಿಲ್ಲ.

20 ವರ್ಷದ ಕಾನಿಷ್ಕ್ ಸಜ್ನಾನಿ ಕೂಡ ಡಜನ್ ಗಟ್ಟಲೆ ಭಾರತೀಯರ ವೆಬ್ ಸೈಟ್ ಹ್ಯಾಕ್ ಮಾಡಿದ್ದ, ಆದ್ರೆ ದುರುದ್ದೇಶದಿಂದಲ್ಲ. ಏರ್ ಇಂಡಿಯಾ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳಲ್ಲಿದ್ದ ತಾಂತ್ರಿಕ ತೊಡಕನ್ನು ಮನವರಿಕೆ ಮಾಡಿಕೊಟ್ಟಿದ್ದಾನೆ. ಆ ಸಂಸ್ಥೆಗಳಿಗೆ ಆಗಬಹುದಾಗಿದ್ದ ಅಪಾರ ನಷ್ಟವನ್ನು ತಪ್ಪಿಸಿದ್ದಾನೆ.

ಏರ್ ಇಂಡಿಯಾದಲ್ಲಿ ಎಂತಹ ಲೂಪ್ ಹೋಲ್ ಇತ್ತು ಅಂದ್ರೆ ಯಾರು ಬೇಕಾದ್ರೂ ಶೇ.95ರಷ್ಟು ರಿಯಾಯಿತಿ ಪಡೆದು ಟಿಕೆಟ್ ಬುಕ್ ಮಾಡಬಹುದಿತ್ತು. ಈ ಬಗ್ಗೆ 2015ರ ನವೆಂಬರ್ 4ರಂದು ಕಾನಿಷ್ಕ್ ಇ ಮೇಲ್ ಕಳಿಸಿದ್ದ. ನವೆಂಬರ್ 12ರಂದು ಕಾನಿಷ್ಕ್ ಗೆ ಕರೆ ಮಾಡಿದ ಏರ್ ಇಂಡಿಯಾ ಮ್ಯಾನೇಜರ್, ಆತ ಕಂಡುಹಿಡಿದಿದ್ದ ಪ್ರಮಾದವನ್ನು ಸಾಬೀತು ಮಾಡುವಂತೆ ಕೇಳಿದ್ದರು. ಅದರಂತೆ ಕಾನಿಷ್ಕ್ ಕೇವಲ 1 ರೂಪಾಯಿಗೆ ಅಮೆರಿಕಕ್ಕೆ ಏರ್ ಇಂಡಿಯಾ ವಿಮಾನದ ಟಿಕೆಟ್ ಬುಕ್ ಮಾಡಿದ್ದ.

ಕೊನೆಗೆ ಏರ್ ಇಂಡಿಯಾ ಅವನಿಗೆ ಇಂಟರ್ನ್ಷಿಪ್ ಆಫರ್ ಮಾಡಿತ್ತು. ಅದನ್ನು ಕಾನಿಷ್ಕ್ ತಿರಸ್ಕರಿಸಿದ್ದ. ಅದಾದ್ಮೇಲೆ ಕೇವಲ 4 ರೂಪಾಯಿಗೆ ಕಾನಿಷ್ಕ್ ಗೋವಾಕ್ಕೆ ಸ್ಪೈಸ್ ಜೆಟ್ ಟಿಕೆಟ್ ಬುಕ್ ಮಾಡಿದ್ದ. ಟಿಕೆಟ್ ನ ಅಸಲಿ ಬೆಲೆ 4028 ರೂಪಾಯಿ. ಸ್ಪೈಸ್ ಜೆಟ್ ಕಂಪನಿಗೆ ಈ ಬಗ್ಗೆ ವಿವರಿಸಿ ಇಮೇಲ್ ಮಾಡಿದ್ರೂ, ಎಲ್ಲಿ ಪ್ರಮಾದವಾಗಿದೆ ಅನ್ನೋದನ್ನು ಕಾನಿಷ್ಕ್ ವಿವರಿಸಿದ್ರೂ ಅವರು ಅದನ್ನು ಅರ್ಥಮಾಡಿಕೊಂಡಿಲ್ಲ.

ಏರ್ ಇಂಡಿಯಾ, ಸ್ಪೈಸ್ ಜೆಟ್, ಕ್ಲಿಯರ್ ಟ್ರಿಪ್, ಮೊಬಿಕ್ವಿಕ್, ಫಾಸೊಸ್ ಹೀಗೆ ಹತ್ತಾರು ಕಂಪನಿಗಳಿಗೆ ಇದೇ ರೀತಿಯಲ್ಲಿ ಕಾನಿಷ್ಕ್ ಸಹಾಯ ಮಾಡಿದ್ದಾರೆ. ಕಾನಿಷ್ಕ್ ಒಬ್ಬ ಹ್ಯಾಕರ್, ಆದ್ರೆ ಮಾಡ್ತಿರೋದು ಮಾತ್ರ ಒಳ್ಳೆ ಕೆಲಸ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...