alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಎಸ್ಟಿ-ಹಣದುಬ್ಬರದ ಎಫೆಕ್ಟ್ ಗೆ ಬಾಗಿಲು ಮುಚ್ಚಿದ ಶೇ.50ರಷ್ಟು ರೆಸ್ಟೋರೆಂಟ್

ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ನಂತ್ರ ಸಣ್ಣ ಉದ್ಯಮವೊಂದೇ ಅಲ್ಲ ಹೊಟೇಲ್ ಉದ್ಯಮಗಳು ಹೆಚ್ಚು ಸವಾಲು ಎದುರಿಸುತ್ತಿದೆ. ಹೊಟೇಲ್ ಹಾಗೂ ರೆಸ್ಟೋರೆಂಟ್ ಉದ್ಯಮ ಕಳೆದ 12 ತಿಂಗಳಿಂದ ಬಹಳಷ್ಟು ತೊಂದರೆ ಎದುರಿಸುತ್ತಿದೆ. ಇದೇ ಕಾರಣಕ್ಕೆ ಅನೇಕ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳು ಬಾಗಿಲು ಮುಚ್ಚುತ್ತಿವೆ.

ಕಳೆದ 12 ತಿಂಗಳಲ್ಲಿ ಸುಮಾರು 50 ಪ್ರಸಿದ್ಧ ಹೊಟೇಲ್ ಗಳು ಬಂದ್ ಆಗಿವೆ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಹಿಂದಕ್ಕೆ ಪಡೆಯುತ್ತಿರುವುದು ಇದಕ್ಕೆ ಬಹುಮುಖ್ಯ ಕಾರಣವಾಗಿದೆ. ಏರುತ್ತಿರುವ ಹಣದುಬ್ಬರ ಹಾಗೂ ಸ್ಪರ್ಧಾತ್ಮಕ ವಾತಾವರಣದಿಂದಾಗಿ ರೆಸ್ಟೋರೆಂಟ್ ಗೆ ಸಮಸ್ಯೆ ಎದುರಾಗಿದೆ.

ಭಾರತದಲ್ಲಿ ಡೊಮಿನೊ ಪಿಜ್ಜಾ ಹಾಗೂ ಡಂಕಿನ್ ಡೋನಟ್ಸ್ ರೆಸ್ಟೊರೆಂಟ್ ಕಂಪನಿ ಜುಬಿಲ್ಯಾಂಟ್ ಫುಡ್ವರ್ಕ್ಸ್ ಭಾರತದಲ್ಲಿ ಶೇಕಡಾ 40ರಷ್ಟು ಡಂಕಿನ್ ಡೋನಟ್ಸ್ ರೆಸ್ಟೋರೆಂಟ್ ಗಳನ್ನು ಮುಚ್ಚಿದೆ. ಟಿಜಿಐ ಕೂಡ ಕಳೆದ ತಿಂಗಳು ತನ್ನ ಮೂರು ಮಳಿಗೆಗಳನ್ನು ಮುಚ್ಚಿದೆ. ಯುಎಸ್ ರೆಸ್ಟೋರೆಂಟ್ ಚೈನ್ ವೆಂಡಿ ಕೂಡ ತನ್ನ ಕೆಲ ರೆಸ್ಟೋರೆಂಟ್ ಗಳ ಬಾಗಿಲು ಮುಚ್ಚಿದೆ.

ರೆಸ್ಟೋರೆಂಟ್ ಬಾಗಿಲು ಮುಚ್ಚಲು ಅನೇಕ ಕಾರಣಗಳಿವೆ. ಜಿಎಸ್ಟಿ ಜೊತೆ ಸ್ಪರ್ಧೆ,  ಹಣದುಬ್ಬರ, ಹೆದ್ದಾರಿ ಹತ್ತಿರ ಮದ್ಯ ಮಾರಾಟ ನಿಷೇಧ ಸೇರಿದಂತೆ ಅನೇಕ ಕಾರಣಗಳಿಂದ ಹೊಟೇಲ್ ಗಳು ನಷ್ಟ ಅನುಭವಿಸುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...