alex Certify
ಕನ್ನಡ ದುನಿಯಾ       Mobile App
       

Kannada Duniya

ಹುಬ್ಬಳ್ಳಿ ಸೇರಿದಂತೆ ದೇಶದ 5 ಕಡೆ ಇನ್ಪೋಸಿಸ್ ಕೇಂದ್ರ

Infosys 2334ದೇಶದ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸೇವಾ ಸಂಸ್ಥೆಗಳ ಪೈಕಿ ಒಂದಾಗಿರುವ ಇನ್ಪೋಸೀಸ್, ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದ 5 ಕಡೆ ನೂತನ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಹುಬ್ಬಳ್ಳಿ ಕೇಂದ್ರದ ಮೊದಲ ಹಂತದ ನಿರ್ಮಾಣ ಕಾರ್ಯ ಮುಂದಿನ ವರ್ಷದ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಮೊಹಾಲಿ, ನೋಯ್ಡಾ, ನಾಗ್ಪುರ್ ಹಾಗೂ ಇಂದೋರ್ ಗಳಲ್ಲಿನ ಕೇಂದ್ರ ಜನವರಿ ವೇಳೆಗೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಇನ್ಪೋಸಿಸ್ ನಲ್ಲಿ 1.96 ಲಕ್ಷ ಸಿಬ್ಬಂದಿಗಳಿದ್ದು, ಕಂಪನಿ, ಸಿಬ್ಬಂದಿ ನೇಮಕಾತಿ ಹೆಚ್ಚಿಸಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಈ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕಗೊಳ್ಳಲಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕಾರ್ಪೋರೇಟ್ ಕಛೇರಿ ಹೊಂದಿರುವ ಇನ್ಪೋಸಿಸ್ ಬೆಂಗಳೂರಿನಲ್ಲಿ ಒಟ್ಟು 8 ಕಛೇರಿಗಳನ್ನು ಹೊಂದಿದೆ. ಇನ್ನುಳಿದಂತೆ ಪುಣೆಯಲ್ಲಿ ಮೂರು, ಮಂಗಳೂರು, ಚೆನ್ನೈ, ಚಂಡೀಗಡ ಮತ್ತು ತಿರುವನಂತಪುರದಲ್ಲಿ ತಲಾ ಎರಡು ಹಾಗೂ ಮೈಸೂರಿನಲ್ಲಿ ಒಂದು ಕೇಂದ್ರ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...