alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ಯಾಸ್ ಸಬ್ಸಿಡಿ ಪಡೆಯುವವರಿಗೆ ತಿಳಿದಿರಲಿ ಈ ಬಹು ಮುಖ್ಯ ಮಾಹಿತಿ

ಅಡುಗೆ ಅನಿಲದ ಸಬ್ಸಿಡಿ ಪಡೆಯುತ್ತಿದ್ದು, ಅನೇಕ ತಿಂಗಳಿಂದ ಸಬ್ಸಿಡಿ ಬಂದಿಲ್ಲವೆಂದ್ರೆ ಚಿಂತೆ ಮಾಡುವ ಅಗತ್ಯವಿಲ್ಲ. ಕಾರಣ ಏನು ಎಂಬುದನ್ನು ಈಗ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಒಂದು ನಂಬರ್ ಗೆ ಕರೆ ಮಾಡಿದ್ರೆ ನಿಮ್ಮೆಲ್ಲ ಸಮಸ್ಯೆಗೆ ಉತ್ತರ ಸಿಗ್ತಿದೆ.

ಆನ್ಲೈನ್ ನಲ್ಲಿ ಚೆಕ್ ಮಾಡುವ ಜೊತೆಗೆ ಗ್ಯಾಸ್ ಸಬ್ಸಿಡಿ ಸಿಕ್ಕಿಲ್ಲವೆಂದು ದೂರನ್ನು ಕೂಡ ನೀಡಬಹುದಾಗಿದೆ. ದೂರು ನೀಡಿದ ತಕ್ಷಣ ಪೆಟ್ರೋಲ್ ಕಂಪನಿಗಳು ಕ್ರಮಕೈಗೊಳ್ಳಲಿವೆ. ಗ್ಯಾಸ್ ಸಬ್ಸಿಡಿ ಬಗ್ಗೆ www.mylpg.in ಗೆ ಲಾಗಿನ್ ಆಗಬೇಕು. ಅಲ್ಲಿ ಮೂರು ಗ್ಯಾಸ್ ಕಂಪನಿಗಳ ಹೆಸರು ಕಾಣಲಿದೆ. ನೀವು ಬಳಸುತ್ತಿರುವ ಗ್ಯಾಸ್ ಕಂಪನಿ ಮೇಲೆ ಕ್ಲಿಕ್ ಮಾಡಬೇಕು. ಅದ್ರಲ್ಲಿ ಕೆಲವೊಂದು ಮಾಹಿತಿ ಕೇಳಲಾಗುತ್ತದೆ. ಅದನ್ನು ನೀಡಬೇಕಾಗುತ್ತದೆ.

ನಿಮ್ಮ ಫೋನ್ ನಂಬರ್ ಹಾಗೂ ಎಲ್ ಪಿ ಜಿ ಕೋಡ್ ತುಂಬಿದ ತಕ್ಷಣ ನಿಮ್ಮ ಸಿಲಿಂಡರ್ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಲಭ್ಯವಾಗಲಿದೆ. ಇದ್ರಲ್ಲಿ ನಿಮ್ಮ ಸಬ್ಸಿಡಿ ಹಣ ಯಾವ ಖಾತೆಗೆ ಜಮಾ ಆಗ್ತಿದೆ ಎನ್ನುವ ಮಾಹಿತಿ ಕೂಡ ನಿಮಗೆ ಸಿಗಲಿದೆ.

ಒಂದು ವೇಳೆ ಬೇರೆ ಖಾತೆಗೆ ನಿಮ್ಮ ಹಣ ಜಮಾ ಆಗ್ತಿದ್ದರೆ ಆನ್ಲೈನ್ ಮೂಲಕವೇ ನೀವು ದೂರು ನೀಡಬಹುದು. ಇಲ್ಲವಾದ್ರೆ ಟೋಲ್ ಫ್ರೀ ನಂಬರ್ 18002333555 ಗೆ ಕರೆ ಮಾಡಿ ದೂರು ನೀಡಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...