alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 999 ರೂ.ಗೆ ವಿಮಾನದಲ್ಲಿ ಪ್ರಯಾಣ ಬೆಳೆಸುವ ಅವಕಾಶ

ವಿಮಾನ ಪ್ರಯಾಣಿಕರಿಗೊಂದು ಸಂತೋಷದ ಸುದ್ದಿ. ರೈಲಿಗಿಂತ ಕಡಿಮೆ ದರದಲ್ಲಿ ವಿಮಾನದಲ್ಲಿ ಪ್ರಯಾಣ ಬೆಳೆಸಬಹುದು. ದೇಶದ ಅತಿ ದೊಡ್ಡ ವಾಯುಯಾನ ಕಂಪೆನಿಗಳಲ್ಲಿ ಒಂದಾದ ಇಂಡಿಗೊ ಈ ಕೊಡುಗೆ ನೀಡ್ತಿದೆ.

ಕಂಪನಿ ತನ್ನ 10 ಲಕ್ಷ ಸೀಟುಗಳಿಗಾಗಿ ಈ ಸೇಲ್ ಶುರು ಮಾಡಿದೆ. ಇದ್ರ ಅಡಿ ಟಿಕೆಟ್ ಬುಕ್ಕಿಂಗ್ ಬೆಲೆ 999 ರೂಪಾಯಿಯಿಂದ ಶುರುವಾಗಲಿದೆ. ಕಂಪನಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದು, ಸೀಮಿತ ಅವಧಿಗೆ ಮಾತ್ರ ಈ ಸೇಲ್ ಇರಲಿದೆ. ಕಂಪನಿ ಪ್ರಕಾರ ಪ್ರಯಾಣಿಕರು ಒಂದು ಕಡೆ ಹೋಗಲು 999 ರೂಪಾಯಿ ನೀಡಬೇಕು.

ಇದ್ರ ಜೊತೆ ಕಂಪನಿ ಕ್ಯಾಶ್ಬ್ಯಾಕ್ ಆಫರ್ ಕೂಡ ನೀಡ್ತಿದೆ. ಗ್ರಾಹಕರಿಗೆ ಶೇಕಡಾ 20 ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ. ಮೊಬಿಕ್ವಿಕ್ ವಾಲೆಟ್ ಮೂಲಕ ಹಣ ಸಂದಾಯ ಮಾಡುವವರಿಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಸುಮಾರು 600 ರೂಪಾಯಿಯವರೆಗೆ ಕ್ಯಾಶ್ಬ್ಯಾಕ್ ಸಿಗುವ ಸಾಧ್ಯತೆಯಿದೆ.

ಇಂಡಿಗೊ ಈ ಸೇಲ್ ಸೆಪ್ಟೆಂಬರ್ ಮೂರರಿಂದ ಸೆಪ್ಟೆಂಬರ್ 6 ರವರೆಗೆ ನಡೆಯಲಿದೆ. ಸೆಪ್ಟೆಂಬರ್ 18, 2018 ರಿಂದ ಮಾರ್ಚ್ 30, 2019 ರವರೆಗೆ ವಿಮಾನದಲ್ಲಿ ಪ್ರಯಾಣ ಬೆಳೆಸಲು ಅವಕಾಶವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...