alex Certify
ಕನ್ನಡ ದುನಿಯಾ       Mobile App
       

Kannada Duniya

900 ರೂ.ಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿ

INDIGOವಿಮಾನಯಾನ ಸಂಸ್ಥೆಗಳೆಲ್ಲ ಪೈಪೋಟಿಗೆ ಬಿದ್ದು ಪ್ರಯಾಣಿಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ನೀಡುತ್ತಿವೆ. ಏರ್ ಏಷ್ಯಾ ಮತ್ತು ವಿಸ್ತಾರಾದ ಬೆನ್ನಲ್ಲೇ ಇಂಡಿಗೋ ಕೂಡ ಸ್ಥಳೀಯ ಪ್ರಯಾಣಕ್ಕೆ ಅಗ್ಗದ ದರವನ್ನು ಪ್ರಕಟಿಸಿದೆ.

ಇಂಡಿಗೋ ಏರ್ ಟಿಕೆಟ್ ಬೆಲೆ ಪ್ರಾರಂಭವಾಗೋದು 900 ರೂಪಾಯಿಗಳಿಂದ. ಜಮ್ಮು-ಶ್ರೀನಗರ ಹಾಗೂ ದೆಹಲಿ-ಜೈಪುರ ಮಾರ್ಗಗಳಲ್ಲಿ ಕೇವಲ 900 ರೂಪಾಯಿಗೆ ನೀವು ವಿಮಾನದಲ್ಲಿ ಪ್ರಯಾಣ ಮಾಡಬಹುದು.

ದೆಹಲಿ- ಲಖ್ನೋ ಮಾರ್ಗಕ್ಕೆ 1349 ರೂ., ಗುವಾಹಟಿ- ಬಗ್ದೋಗ್ರಾ ಮಾರ್ಗಕ್ಕೆ 1648 ರೂ., ಜಮ್ಮು- ದೆಹಲಿ ಮಾರ್ಗಕ್ಕೆ 1750 ರೂ., ದೆಹಲಿ- ವಾರಣಾಸಿ ಪ್ರಯಾಣಕ್ಕೆ 1846 ರೂ., ಶ್ರೀನಗರ- ದೆಹಲಿಗೆ 1890 ರೂ. ಹಾಗೂ ದೆಹಲಿ- ಜಮ್ಮು ಮಾರ್ಗದ ವಿಮಾನ ಪ್ರಯಾಣಕ್ಕೆ 1896 ರೂಪಾಯಿ ನಿಗದಿ ಮಾಡಲಾಗಿದೆ.

ಸೆಪ್ಟೆಂಬರ್ 10 ರಿಂದ ಈ ಕೊಡುಗೆ ಆರಂಭವಾಗಲಿದ್ದು, ಸೆಪ್ಟೆಂಬರ್ 13 ರಿಂದ 30 ರವರೆಗೆ ಪ್ರಯಾಣಕ್ಕೆ ಅವಕಾಶವಿದೆ. ಸಾಮಾನ್ಯವಾಗಿ ಜನವರಿ- ಮಾರ್ಚ್ ಮತ್ತು ಜುಲೈ- ಸೆಪ್ಟೆಂಬರ್ ಅಂತ್ಯದವರೆಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ಹಾಗಾಗಿ ಪ್ರಯಾಣಿಕರನ್ನು ಸೆಳೆಯಲು ವಿಮಾನಯಾನ ಸಂಸ್ಥೆಗಳು ವಿಶೇಷ ಆಫರ್ ನೀಡುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...