alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ‘ತೇಲುವ ಮಾರುಕಟ್ಟೆ’

2018 ರ ಜನವರಿಯಲ್ಲಿ ಭಾರತದ ಪ್ರಪ್ರಥಮ ತೇಲುವ ಮಾರುಕಟ್ಟೆ ಕೋಲ್ಕತ್ತಾದಲ್ಲಿ ಉದ್ಘಾಟನೆಯಾಗಲಿದೆ. 10 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಈ ಮಾರುಕಟ್ಟೆಯಲ್ಲಿ ಸುಮಾರು 200 ಅಂಗಡಿಗಳಿರುತ್ತವೆ ಎನ್ನಲಾಗಿದೆ.

ಕೆಲ ತಿಂಗಳುಗಳ ಹಿಂದೆ ಬ್ಯಾಂಕಾಕ್  ಗೆ ಭೇಟಿ ನೀಡಿದ್ದ ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ಫಿರಾದ್ ಹಕೀಮ್, ಅಲ್ಲಿನ ತೇಲುವ ಮಾರುಕಟ್ಟೆಯನ್ನು ನೋಡಿ ಕೋಲ್ಕತ್ತಾದಲ್ಲಿಯೂ ಇದೇ ತೆರನಾದ ಮಾರುಕಟ್ಟೆ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅವರ ಕನಸು ಈಗ ಸಾಕಾರಗೊಳ್ಳುತ್ತಿದೆ.

ಕಾಶ್ಮೀರದ ದಾಲ್ ಸರೋವರದಲ್ಲಿ ತೇಲುವ ಮಾರುಕಟ್ಟೆ ಕಾರ್ಯ ನಿರ್ವಹಿಸುತ್ತಿದ್ದರೂ ವ್ಯವಸ್ಥಿತವಾಗಿಲ್ಲ. ಆದರೆ ಕೋಲ್ಕತ್ತಾದ ಪಟೋಲಿಯಲ್ಲಿ 500 ಮೀಟರ್ ಉದ್ದ ಹಾಗೂ 60 ಮೀಟರ್ ಅಗಲ ವಿಸ್ತೀರ್ಣದ ಸಕಲ ಸೌಲಭ್ಯಗಳನ್ನೊಳಗೊಂಡ ವ್ಯವಸ್ಥಿತ ತೇಲುವ ಮಾರುಕಟ್ಟೆ ಸಿದ್ಧಗೊಂಡಿದೆ. ಇದರ ಉದ್ಘಾಟನೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2018 ರ ಜನವರಿಯಲ್ಲಿ ನೆರವೇರಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...