alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಮೊಬೈಲ್ ಬಳಕೆ ಬಗ್ಗೆ ‘ಶಾಕಿಂಗ್’ ಮಾಹಿತಿ

ಭಾರತೀಯರಲ್ಲಿ ಮೊಬೈಲ್ ಕ್ರೇಝ್ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಆ್ಯಪ್ ಅನ್ನಿ ಸಂಸ್ಥೆಯ ಲೇಟೆಸ್ಟ್ ರಿಪೋರ್ಟ್. 2017ರಲ್ಲಿ ಜಾಗತಿಕ ಮಟ್ಟದಲ್ಲಿ 175 ಬಿಲಿಯನ್ ಆ್ಯಪ್ ಡೌಲ್ನೋಡ್ ಮಾಡಲಾಗಿದೆ. ಇದರಲ್ಲಿ ಭಾರತಕ್ಕೆ ಮೂರನೇ ಸ್ಥಾನ. ಚೀನಾ ಮತ್ತು ಬ್ರೆಜಿಲ್ ಬಿಟ್ರೆ ಅತಿ ಹೆಚ್ಚು ಆ್ಯಪ್ ಡೌನ್ಲೋಡ್ ಮಾಡಿರೋದು ಭಾರತದಲ್ಲಿ.

ಅಮೆರಿಕವನ್ನೂ ಭಾರತ ಹಿಂದಿಕ್ಕಿದೆ. ಚೀನಾ ಮೊದಲ ಸ್ಥಾನದಲ್ಲಿದ್ದು, ರಷ್ಯಾ, ಅಮೆರಿಕ ಮತ್ತು ಬ್ರೆಜಿಲ್ ಟಾಪ್ 5ನಲ್ಲಿ ಕಾಣಿಸಿಕೊಂಡಿವೆ. 2016ರ ಸೆಪ್ಟೆಂಬರ್ ನಲ್ಲಿ ಜಿಯೋ ಆಫರ್ ಬಿಡುಗಡೆಯಾದಾಗಿನಿಂದ ಭಾರತದಲ್ಲಿ ಆ್ಯಪ್ ಡೌನ್ಲೋಡ್ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.

ಚೀನಾದಲ್ಲಿ ಮೊಬೈಲ್ ಬಳಕೆದಾರರು ಸರಾಸರಿ 100 ಆ್ಯಪ್ ಗಳನ್ನು ಹೊಂದಿದ್ದಾರಂತೆ. ಅವುಗಳಲ್ಲಿ ತಿಂಗಳಿಗೆ 40 ಆ್ಯಪ್ ಬಳಸ್ತಿದ್ದಾರೆ. ಭಾರತೀಯರು 80 ಆ್ಯಪ್ ಗಳನ್ನು ಹೊಂದಿದ್ದು, 40 ಅಪ್ಲಿಕೇಶನ್ ಗಳನ್ನು ಬಳಸುತ್ತಿದ್ದಾರೆ. ಸಮೀಕ್ಷೆ ಪ್ರಕಾರ ಜನರು ವರ್ಷದಲ್ಲಿ ಒಂದೂವರೆ ತಿಂಗಳ ಸಮಯವನ್ನು ಆ್ಯಪ್ ಬಳಸೋದ್ರಲ್ಲೇ ಕಳೆಯುತ್ತಿದ್ದಾರೆ.

ಭಾರತೀಯರು ಸಹ ದಿನಕ್ಕೆ 3 ಗಂಟೆಗಳನ್ನು ಆ್ಯಪ್ ಬಳಕೆಗೆ ಮೀಸಲಾಗಿಟ್ಟಿದ್ದಾರೆ. ಭಾರತೀಯರು ಅತಿ ಹೆಚ್ಚಾಗಿ ಬಳಸಿರುವ ಆ್ಯಪ್ ಅಂದ್ರೆ ವಾಟ್ಸಾಪ್. ಅದನ್ನು ಬಿಟ್ರೆ ಮೆಸೆಂಜರ್, ಫೇಸ್ಬುಕ್, ಮತ್ತು ಟ್ರೂ ಕಾಲರ್ ಅನ್ನು ಬಳಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...