alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಿ ಪ್ರವಾಸಿಗರಿಂದ ಭಾರತಕ್ಕೆ ಸಿಕ್ಕಿದೆ ಭಾರೀ ಆದಾಯ

2017ರಲ್ಲಿ ಭಾರತದ ಪ್ರವಾಸೋದ್ಯಮ ಸಾಕಷ್ಟು ಪ್ರಗತಿ ಕಂಡಿದೆ. ವಿದೇಶಿ ಪ್ರವಾಸಿಗರ ಸಂಖ್ಯೆ 1 ಕೋಟಿ ಮೀರಿದೆ. ಇದರಿಂದಾಗಿ ಭಾರತಕ್ಕೆ ಸಿಕ್ಕಿರೋ ಆದಾಯ ಸರಿಸುಮಾರು 27 ಬಿಲಿಯನ್ ಡಾಲರ್ ಅಂತಾ ಅಂದಾಜಿಸಲಾಗಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಎ.ಕೆ.ಅಲ್ಫೋನ್ಸ್ ಈ ಬಗ್ಗೆ ವಿವರ ನೀಡಿದ್ದಾರೆ.

ಪ್ರವಾಸೋದ್ಯಮದಿಂದ್ಲೇ ಭಾರತದಲ್ಲಿ ಶೇ.12ರಷ್ಟು ಉದ್ಯೋಗ ಕೂಡ ಸೃಷ್ಟಿಯಾಗಿರುವುದು ವಿಶೇಷ. ಪ್ರವಾಸೋದ್ಯಮದಲ್ಲಿ ಉತ್ತುಂಗದಲ್ಲಿರೋ ರಾಷ್ಟ್ರಗಳ ಪೈಕಿ ಈ ಹಿಂದೆ ಭಾರತ 65ನೇ ಸ್ಥಾನದಲ್ಲಿತ್ತು. ಈಗ 40ನೇ ಸ್ಥಾನಕ್ಕೆ ಬಡ್ತಿ ಕೂಡ ಪಡೆದಿದೆ.

ಮೂಲಸೌಕರ್ಯಗಳಿಗೆ ಒತ್ತು ನೀಡಿರುವುದು ಮತ್ತು ಸ್ವದೇಶ್ ದರ್ಶನ್ ನಂತಹ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿರುವುದೇ ಈ ಬೆಳವಣಿಗೆಗೆ ಕಾರಣ ಅಂತಾ ಸಚಿವರು ಹೇಳಿದ್ದಾರೆ. ಈ ವರ್ಷ ಕೂಡ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 11 ವಿಶಿಷ್ಟ ಯೋಜನೆಗಳನ್ನು ಹಮ್ಮಿಕೊಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...