alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲುಗಳ ಮೇಲೂ ರಾರಾಜಿಸಲಿವೆ ಜಾಹೀರಾತುಗಳು

indian-railways-to-rake-in-rs-11k-crore-with-ad-wrapped-trainsನವದೆಹಲಿ: ಭಾರತದ ರೈಲುಗಳಿನ್ನು ಬಣ್ಣ ಬಣ್ಣದ ಜಾಹೀರಾತುಗಳಿಂದ ಕಂಗೊಳಿಸಲಿದೆ. ರೈಲ್ವೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಬೋಗಿಗಳ ಮೇಲೆ ಜಾಹೀರಾತುಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ.

ಜಾಹೀರಾತಿನಿಂದ ರೈಲ್ವೆಗೆ ಹೆಚ್ಚಿನ ಆದಾಯ ಸಿಗಲಿದೆ. 10 ಸಾವಿರ ರೈಲಿನಲ್ಲಿ ಜಾಹೀರಾತು ಪ್ರದರ್ಶಿಸುವುದರಿಂದ 11 ಸಾವಿರ ಕೋಟಿ ರೂ. ಆದಾಯ ಗಳಿಸಬಹುದಾಗಿದೆ. ಇದರಿಂದ ಜಾಹೀರಾತು, ಹೆಚ್ಚಿನ ಸಂಖ್ಯೆಯ ಜನರನ್ನೂ ತಲುಪಲಿದೆ.

ಜಾಹೀರಾತುಗಳನ್ನು ಪ್ರದರ್ಶಿಸುವುದಕ್ಕಾಗಿ ರೈಲಿನ ಬೋಗಿಗಳ ಹೊರಭಾಗದಲ್ಲಿ ವಿನೈಲ್ ರ್ಯಾಪಿಂಗ್ ಮಾಡಲಾಗುತ್ತದೆ. ಇದರಿಂದ ಇಡೀ ರೈಲಿಗೆ ಜಾಹೀರಾತಿಗಾಗಿ ಪೇಂಟಿಂಗ್ ಮಾಡುವ ಸಮಸ್ಯೆ ಇರುವುದಿಲ್ಲ. ಕೇವಲ ಒಂದು ಶೀಟ್ ಅನ್ನು ರೈಲಿನ ಹೊರಭಾಗಕ್ಕೆ ಅಂಟಿಸಿ ಅದರ ಮೇಲೆ ಜಾಹೀರಾತುಗಳನ್ನು ಅಂಟಿಸಬಹುದಾಗಿದೆ. ಇದರಿಂದ ರೈಲಿನ ಮೂಲ ಬಣ್ಣಕ್ಕೂ ಧಕ್ಕೆ ಉಂಟಾಗುವುದಿಲ್ಲ.

ಮೊದಲ ಹಂತದಲ್ಲಿ ಮುಂಬೈ ರಾಜಧಾನಿ, ಮುಂಬೈ-ಅಹಮದಾಬಾದ್ ಶತಾಬ್ದಿ ಎಕ್ಸಪ್ರೆಸ್, ಮಹಾರಾಷ್ಟ್ರ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ಮತ್ತು ಗೋಲ್ಡನ್ ಟೆಂಪಲ್ ಮೇಲ್ ಮುಂತಾದ ರೈಲುಗಳಲ್ಲಿ ಜಾಹೀರಾತು ಪ್ರದರ್ಶನವಾಗಲಿದೆ. ನಂತರದ ದಿನಗಳಲ್ಲಿ ಶತಾಬ್ದಿ ಎಕ್ಸಪ್ರೆಸ್ ಗಳಿಗೂ ಈ ಯೋಜನೆ ವಿಸ್ತಾರವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇಂತಹ ಜಾಹೀರಾತುಗಳಿಂದ ರೈಲ್ವೆ ಆದಾಯ ಹೆಚ್ಚುತ್ತದೆ ಎಂದು ರೈಟ್ಸ್ ಇಂಜಿನಿಯರಿಂಗ್ ಸಂಸ್ಥೆ ವರದಿ ನೀಡಿತ್ತು. ಸುರೇಶ್ ಪ್ರಭು ಅವರು ರೈಲ್ವೆ ಸಚಿವರಾಗಿ ನಿಯುಕ್ತರಾದ ನಂತರ ಈ ಕುರಿತು ತೀರ್ಮಾನ ಕೈಗೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...