alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ರೈಲ್ವೆಗೆ ಸಲಹೆ ನೀಡಿ 10 ಲಕ್ಷದವರೆಗೆ ಬಹುಮಾನ ಗೆಲ್ಲಿ

ಸರ್ಕಾರದ ಜೊತೆ ಭಾರತೀಯ ರೈಲ್ವೆ ಬಗ್ಗೆ ನಿಮಗೂ ಕಾಳಜಿಯಿದ್ದು, ಅದ್ರ ಸೇವೆಯನ್ನು ಅಭಿವೃದ್ಧಿಪಡಿಸ ಬಯಸಿದ್ರೆ ರೈಲ್ವೆ ಇಲಾಖೆಗೆ ಐಡಿಯಾ ನೀಡಬಹುದು. ಈ ಐಡಿಯಾ ಚೆನ್ನಾಗಿದ್ದಲ್ಲಿ ಲಕ್ಷಾಂತರ ರೂಪಾಯಿ ಗಳಿಸಬಹುದು.

ಸದ್ಯ ರೈಲ್ವೆ ಇಲಾಖೆ How to Raise Money For Railways To Provide Better Services ಸ್ಪರ್ಧೆ ಏರ್ಪಡಿಸಿದೆ. ಭಾರತೀಯ ರೈಲ್ವೆ ಆದಾಯ ಹೆಚ್ಚಿಸಲು ಜನರಿಂದ ಸಲಹೆ ಕೇಳಿದೆ. ನಿಮ್ಮ ಐಡಿಯಾ ಚೆನ್ನಾಗಿದ್ದರೆ ನೀವು 1 ಲಕ್ಷದಿಂದ 10 ಸಾವಿರದವರೆಗೆ ಬಹುಮಾನದ ರೂಪದಲ್ಲಿ ಹಣ ಗಳಿಸಬಹುದಾಗಿದೆ.

ಸೇವೆಗಳನ್ನು ಉತ್ತಮಗೊಳಿಸಿ ಆದಾಯ ಗಳಿಸುವ ಬಗ್ಗೆ ಜನಸಾಮಾನ್ಯರು ತಮ್ಮ ಐಡಿಯಾ ನೀಡಬಹುದು. ನಿಮ್ಮ ಐಡಿಯಾದಿಂದ ರೈಲ್ವೆ ಇಲಾಖೆಗೆ ಲಾಭವಾಗುತ್ತೆ ಎನ್ನಿಸಿದ್ರೆ ಮೊದಲ ವಿಜೇತನಿಗೆ 10 ಲಕ್ಷ ರೂಪಾಯಿ, ಎರಡನೇ ವಿಜೇತನಿಗೆ 5 ಲಕ್ಷ ರೂಪಾಯಿ, ಮೂರನೇ ವಿಜೇತನಿಗೆ 3 ಲಕ್ಷ ರೂಪಾಯಿ ಕೊನೆಯ ಹಾಗೂ ನಾಲ್ಕನೇ ವಿಜೇತನಿಗೆ 1 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಯಸುವವರು https://innovate.mygov.in ಗೆ ಹೋಗಿ participate ಬಟನ್ ಕ್ಲಿಕ್ ಮಾಡಬೇಕು. ಅಲ್ಲಿ ಹೆಸರು ನೋಂದಣಿ ಮಾಡಬೇಕು. ನಂತ್ರ 1000 ಶಬ್ಧದಲ್ಲಿ ನಿಮ್ಮ ಸಲಹೆ ನೀಡಬೇಕು. ಬೇಕಾದಲ್ಲಿ ಪಿಡಿಎಫ್ ಅಟ್ಯಾಚ್ ಮಾಡಬಹುದು. ಆದ್ರೆ ಅದು 8ಎಂಬಿಗಿಂತ ಹೆಚ್ಚಿರಬಾರದು. ಮೇ 19ರೊಳಗೆ ನಿಮ್ಮ ಸಲಹೆ ಕಳುಹಿಸಲು ಅವಕಾಶವಿದೆ. ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಕಳುಹಿಸಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...