alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಸಿ. ಕೋಚ್ ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ

ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಅದೇ ನಿಟ್ಟಿನಲ್ಲಿ ಈಗ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದನ್ನು ರೈಲ್ವೆ ಇಲಾಖೆ ನೀಡಿದೆ. ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆಯ ಎಸಿ ಕೋಚ್ ಟಿಕೆಟ್ ದರದಲ್ಲಿ ಇಳಿಕೆಯಾಗಿದೆ.

ಐದು ಎಕ್ಸ್ ಪ್ರೆಸ್ ರೈಲಿನ ಎಸಿ ಟಿಕೆಟ್ ದರವನ್ನು ರೈಲ್ವೆ ಇಲಾಖೆ ಇಳಿಕೆ ಮಾಡಿದೆ. ಬೆಂಗಳೂರು, ಗದಗ ಹಾಗೂ ಮೈಸೂರು ರೈಲಿನ ಟಿಕೆಟ್ ದರ ಇಳಿಕೆ ಪ್ರಯಾಣಿಕರ ಖುಷಿಗೆ ಕಾರಣವಾಗಿದೆ. ಎಸಿ ಕೋಚ್ ನಲ್ಲಿ ಪ್ರಯಾಣಿಸಲು ಪ್ರಯಾಣಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ದರ ಇಳಿಕೆ ನಿರ್ಧಾರ ಕೈಗೊಂಡಿದೆ.

ದಕ್ಷಿಣ-ಪಶ್ಚಿಮ ರೈಲ್ವೆ ಟಿಕೆಟ್ ದರದಲ್ಲಿ 235 ರೂಪಾಯಿಯವರೆಗೆ ಇಳಿಕೆ ಮಾಡಿದೆ. ದಕ್ಷಿಣ-ಪಶ್ಚಿಮ ರೈಲ್ವೆ ವಿಭಾಗ ತೆಗೆದುಕೊಂಡ ನಿರ್ಧಾರವನ್ನು ಉಳಿದ ವಿಭಾಗಗಳೂ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾದಲ್ಲಿ ಇದ್ರ ಲಾಭ ಪ್ರಯಾಣಿಕರಿಗಾಗಲಿದೆ.

ಗದಗ-ಮುಂಬೈ ಎಕ್ಸ್ ಪ್ರೆಸ್ ರೈಲಿನ ಎಸಿ ಕೋಚ್ ಟಿಕೆಟ್ ಬೆಲೆ 495 ರೂಪಾಯಿ ಬದಲು 435 ರೂಪಾಯಿಯಾಗಿದೆ. ನವೆಂಬರ್ 11ರಿಂದ ಹೊಸ ಬೆಲೆ ಜಾರಿಗೆ ಬರಲಿದೆ.

ಮೈಸೂರು-ಶಿರಡಿ ವೀಕ್ಲಿ ಎಕ್ಸ್ ಪ್ರೆಸ್ ನ ಎಸಿ ಕೋಚ್ ಟಿಕೆಟ್ ದರ 495 ರೂಪಾಯಿಯಿತ್ತು. ಅದೀಗ 260 ರೂಪಾಯಿಯಾಗಿದೆ. ಇದ್ರ ನೂತನ ದರ ಡಿಸೆಂಬರ್ 3ರಿಂದ ಜಾರಿಗೆ ಬರಲಿದೆ.

ಯಶವಂತಪುರ –ಬಿಕನೇರ್ ಎಕ್ಸ್ ಪ್ರೆಸ್  ಎಸಿ ಕೋಚ್ ಟಿಕೆಟ್ ಬೆಲೆ 590 ರೂಪಾಯಿಯಾಗಿದೆ. ಈ ಹಿಂದೆ ಅದ್ರ ಬೆಲೆ 735 ರೂಪಾಯಿಯಿತ್ತು. ನವೆಂಬರ್ 30ರಿಂದ ನೂತನ ದರ ಜಾರಿಗೆ ಬರಲಿದೆ.

ಯಶವಂತಪುರ-ಹುಬ್ಬಳಿ ವೀಕ್ಲಿ ಎಕ್ಸ್ ಪ್ರೆಸ್ ಎಸಿ ಕೋಚ್ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಯಶವಂತಪುರ-ಸಿಕಂದರಾಬಾದ್ ಎಕ್ಸ್ ಪ್ರೆಸ್ ಎಸಿ ಕೋಚ್ ಟಿಕೆಟ್ ದರದಲ್ಲಿಯೂ ಇಳಿಕೆ ಮಾಡಲಾಗಿದೆ. 345 ರೂಪಾಯಿಯಿದ್ದ ಟಿಕೆಟ್ ಬೆಲೆ 305 ರೂಪಾಯಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...