alex Certify
ಕನ್ನಡ ದುನಿಯಾ       Mobile App
       

Kannada Duniya

10 ನೇ ಕ್ಲಾಸ್ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ

ರೈಲ್ವೆ ಇಲಾಖೆ ನಿರುದ್ಯೋಗಿಗಳಿಗೆ ಬಂಪರ್ ಉದ್ಯೋಗಾವಕಾಶ ನೀಡ್ತಿದೆ. 90000 ಹುದ್ದೆ ಗಳಿಗೆ ರೈಲ್ವೆ ಇಲಾಖೆ ಅರ್ಜಿ ಕರೆದಿದೆ. 10ನೇ ಕ್ಲಾಸ್ ಪಾಸ್ ಆದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಸುವರ್ಣಾವಕಾಶವಿದೆ. ಆದ್ರೆ ಈ ಬಾರಿ ಪರೀಕ್ಷೆ ಮೂರು ಷರತ್ತಿನೊಂದಿಗೆ ನಡೆಯಲಿದೆ.

ಗ್ರೂಫ್ ಸಿ ನಲ್ಲಿ ಲೆವಲ್ 1 ಮತ್ತು 2 ಹುದ್ದೆಗೆ ರೈಲ್ವೆ ಇಲಾಖೆ ನೇಮಕಾತಿ ಶುರು ಮಾಡಿದೆ. ಚಾಲಕ ಮತ್ತು ಟೆಕ್ನಿಶಿಯನ್ ಹೊರತುಪಡಿಸಿ ಲೆವಲ್ 1ನಲ್ಲಿ ಫಿಟ್ಟರ್, ಕ್ರೇನ್ ಚಾಲಕ, ಕಮ್ಮಾರ ಮತ್ತು ಬಡಗಿ ಬರ್ತಾರೆ. ಲೆವಲ್ 2ನಲ್ಲಿ ಗ್ಯಾಂಗ್ಮೆನ್, ಪಾಯಿಂಟ್ ಮ್ಯಾನ್, ಗೇಟ್ಮೆನ್ ಮತ್ತು ಸಹಾಯಕ ಬರ್ತಾನೆ.

ಇದಕ್ಕೆ ಅಭ್ಯರ್ಥಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲಿಯೇ ಎಲ್ಲ ಮಾಹಿತಿ ಲಭ್ಯವಿದೆ. ಲೆವಲ್ 2 ಗೆ ವಯಸ್ಸಿನ ಮಿತಿ 18-28 ವರ್ಷ, ಲೆವಲ್ 1ಗೆ ವಯಸ್ಸಿನ ಮಿತಿ 18-31 ವರ್ಷವಾಗಿದೆ. ಲೆವಲ್ 2ನಲ್ಲಿ ಅಭ್ಯರ್ಥಿಗಳಿಗೆ 19900-63200 ಹಾಗೂ ಲೆವಲ್ 1 ಅಭ್ಯರ್ಥಿಗಳಿಗೆ 18000 -56900 ವೇತನ ಸಿಗಲಿದೆ. ಅರ್ಜಿ ಸಲ್ಲಿಸಲು ಮಾರ್ಚ್ 12 ಕೊನೆ ದಿನವಾಗಿದೆ. indianrailways.gov.in ನಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಮೊದಲ ಬಾರಿ ಅರ್ಜಿ ಶುಲ್ಕವನ್ನು ರೈಲ್ವೆ ಇಲಾಖೆ ಏರಿಸಿದೆ. 100 ರೂಪಾಯಿ ಬದಲು ಅಭ್ಯರ್ಥಿಗಳು 500 ರೂಪಾಯಿ ಶುಲ್ಕ ತುಂಬಬೇಕಾಗುತ್ತದೆ. ಎಸ್ ಸಿ, ಎಸ್ಟಿ ಅಭ್ಯರ್ಥಿಗಳು ಕೂಡ 250 ರೂಪಾಯಿ ಶುಲ್ಕ ತುಂಬಬೇಕು. ಈ ಶುಲ್ಕವನ್ನು ಪರೀಕ್ಷೆಗೆ ಕುಳಿತ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ವಾಪಸ್ ಮಾಡಲಿದೆ.

ಆಧಾರ್ ಅನಿವಾರ್ಯ ಗಲಾಟೆ ಕೋರ್ಟ್ ನಲ್ಲಿರುವುದ್ರಿಂದ ಇಲಾಖೆ ಪರೀಕ್ಷೆಗೆ ಆಧಾರ್ ಕಡ್ಡಾಯಗೊಳಿಸಿಲ್ಲ. ಆರ್ ಆರ್ ಬಿ ಅಭ್ಯರ್ಥಿಗಳಿಗೆ ದೊಡ್ಡ ಶಾಕ್ ನೀಡಿದೆ. ಈ ಬಾರಿ ಒಂದೇ ಹುದ್ದೆ, ಒಂದೇ ಅರ್ಜಿ ನಿಯಮ ತಂದಿದೆ. ಅಭ್ಯರ್ಥಿಗಳಿಗೆ ಆನ್ಲೈನಲ್ಲಿ ಪರೀಕ್ಷೆ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...