alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ಉದ್ಯಮದಲ್ಲಿದ್ದಾರೆ ಈ ಮಹಿಳೆ

ಸಾಮಾನ್ಯವಾಗಿ ಮಹಿಳೆಯರು ಮದ್ಯ ಹಾಗೂ ಅದ್ರ ವ್ಯವಹಾರದಿಂದ ದೂರ ಇರ್ತಾರೆ, ಆದ್ರೆ ಲೀಸಾ ಭಾರತದ ಲಿಕ್ಕರ್ ಉದ್ಯಮದಲ್ಲಿ ಏಕಮಾತ್ರ ಲೇಡಿ. ಈ ಉದ್ಯಮಕ್ಕೆ ಈಕೆ ಕಾಲಿಟ್ಟ ನಂತರ ಆಲ್ಕೋಹಾಲ್ ಎಫ್ಎಮ್ಸಿಜಿ ಪಟ್ಟಿಯಲ್ಲಿ ಸೇರಲ್ಪಟ್ಟಿದೆ. ಹಾಗಾಗಿ ಸೂಪರ್ ಮಾರ್ಕೆಟ್ ನಲ್ಲಿ ಕೂಡ ಲಿಕ್ಕರ್ ಆಲ್ಕೋಹಾಲ್ ಲಭ್ಯವಿದೆ.

ಲೀಸಾ ಮೂಲತಃ ಪಂಜಾಬಿನವರು. ಓದಿ, ಬೆಳೆದಿದ್ದು ಯುಕೆಯಲ್ಲಿ. ಮದುವೆ ನಂತರ ಭಾರತಕ್ಕೆ ಬರಬೇಕಾಯ್ತು. ಆದ್ರೆ ಇಲ್ಲಿ ಅಂತರಾಷ್ಟ್ರೀಯ ಉತ್ಪನ್ನ ಸಿಗ್ತಾ ಇರಲಿಲ್ಲ. ಲೀಸಾ ತಂದೆ ಯುಕೆಯಲ್ಲಿ ವಾಸವಾಗಿದ್ದು, ಅವರು ಬಿಯರ್ ಕಂಪನಿಯೊಂದರ ಮಾಲೀಕರು. ಭಾರತಲ್ಲಿಯೂ ಲಿಕ್ಕರ್ ಕಂಪನಿ ಆರಂಭಿಸುವ ಪ್ರೇರಣೆ ಸಿಕ್ಕಿತು.

ಆರಂಭದಲ್ಲಿ ಲೀಸಾಗೆ ತೊಂದರೆಯಾಯ್ತಂತೆ. ಲಿಕ್ಕರ್ ವಿಚಾರದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ನಿಯಮ ಜಾರಿಯಲ್ಲಿರುವುದರಿಂದ ಸ್ವಲ್ಪ ಕಷ್ಟವಾಯ್ತು ಎನ್ನುತ್ತಾರೆ ಲೀಸಾ. ಉತ್ತರಾಖಂಡ್ ನಲ್ಲಿ ಮೊದಲು ಕಂಪನಿ ಶುರುಮಾಡಿದ್ರು. ನಂತರ 14 ರಾಜ್ಯಗಳಿಗೆ ವ್ಯವಹಾರ ವಿಸ್ತರಣೆಯಾಯಿತು.

ಮಹಿಳೆಯೊಬ್ಬಳು ಲಿಕ್ಕರ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವುದು ಆರಂಭದಲ್ಲಿ ಎಲ್ಲರಿಗೂ ಆಶ್ಚರ್ಯ ಹುಟ್ಟಿಸಿತ್ತು. ಕೆಲವರು ಭಿನ್ನವಾಗಿ ನೋಡ್ತಾ ಇದ್ದರು.ಆದ್ರೆ ಯಾವುದೇ ಪರಿಣಾಮ ಲೀಸಾ ಮೇಲಾಗಲಿಲ್ಲ. ಪುರುಷ ಕ್ಷೇತ್ರದಲ್ಲಿ ಮಹಿಳೆಯರು ಕಾಲಿಟ್ರೆ ಏನು ತಪ್ಪು ಎಂದು ಪ್ರಶ್ನಿಸ್ತಾರೆ ಲೀಸಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...